ಮನೆಗೆ ನುಗ್ಗಿ ನಕ್ಸಲರಿಂದ ಗುಂಡಿನ ದಾಳಿ

ಮನೆಗೆ ನುಗ್ಗಿ ನಕ್ಸಲರಿಂದ ಗುಂಡಿನ ದಾಳಿ

ಪಾಟ್ನಾ, ಮೇ. 8, ನ್ಯೂಸ್ ಎಕ್ಸ್ ಪ್ರೆಸ್: ಇತ್ತಿಚಿನ ದಿನಗಳಲ್ಲಿ ನಕ್ಸಲ್ ಅಟ್ಟಹಾಸ ತುಂಬಾನೆ ಕಂಡುಬರುತ್ತಿದ್ದು, ಬಿಹಾರದಲ್ಲಿ ಮತ್ತೆ ನಕ್ಸಲ್ ಅಟ್ಟಹಾಸ ಕೇಳಿಬಂದಿದ್ದು, ಜಮೈ ನಗರದ ಬಳಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ.

ಆಭರಣ ಮಳಿಗೆ ಮಾಲೀಕ ಹಾಗೂ ಆತನ ಪುತ್ರಿ ಗಾಯಗೊಂಡಿದ್ದಾರೆ. 15-20 ನಕ್ಲಸರ ತಂಡವು ಆಭರಣ ಮಾಲೀಕನ ಮನೆಗೆ ನುಗ್ಗಿ ಗುಂಡು ಹಾರಿಸಿದ್ದಾರೆ.

ಈ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿರುವ ತಂದೆ ಹಾಗೂ ಮಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ ಆಭರಣ ಹಾಗೂ ಹಣ ಲೂಟಿಗಾಗಿ ನಕ್ಸಲರು ಈ ದಾಳಿ ನಡೆಸಿರಬಹುದು ಎಂದು ಊಹಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos