ಉಗ್ರರ ಅಡಗುದಾಣ ಪತ್ತೆ

ಉಗ್ರರ ಅಡಗುದಾಣ ಪತ್ತೆ

ಶ್ರೀನಗರ, ಡಿ. 2 : ಜಮ್ಮು-ಕಾಶ್ಮೀರ ಕಣಿವೆಯಲ್ಲಿ ಮತ್ತೊಂದು ಭಾರೀ ವಿಧ್ವಂಸಕ ಕೃತ್ಯವನ್ನು ತಡೆಗಟ್ಟುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಕಾಶ್ಮೀರ ಕಣಿವೆಯ ಸಫೋರ್ ಜಿಲ್ಲೆಯ ದಲ್ರಿ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಅಡಗುತಾಣವೊಂದನ್ನು ಭೇದಿಸಿರುವ ಭದ್ರತಾ ಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಣಿವೆ ಪ್ರಾಂತ್ಯದಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಈ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಉಗ್ರರು ಅಡಗಿಸುತ್ತಿದ್ದರು. 32ನೆ ರಾಷ್ಟ್ರೀಯ ರೈಫಲ್ (ಆರ್ಆರ್), ರಫಿಯಾಬಾದ್ನ ವಿಶೇಷ ಕಾರ್ಯಾಚರಣೆ ಸಮೂಹ (ಎಸ್ಒಜಿ) ಮತ್ತು 92ನೆ ಬೆಟಾಲಿಯನ್ನ ಸಿಆರ್ಪಿಎಫ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos