ದೇವಸ್ಥಾನದಲ್ಲಿ  ಲಕ್ಷ್ಮಿಗೆ ವಿಶೇಷ ಪೂಜೆ

ದೇವಸ್ಥಾನದಲ್ಲಿ  ಲಕ್ಷ್ಮಿಗೆ ವಿಶೇಷ ಪೂಜೆ

ತುಮಕೂರು, ಆ. 9: ವರಮಹಾಲಕ್ಷ್ಮಿಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಮಹಾಲಕ್ಷ್ಮಿ ದೇವಸ್ಥಾನದಲ್ಲಿ  ಲಕ್ಷ್ಮಿ ಕೃಪಾ ಕಟಾಕ್ಷಕ್ಕಾಗಿ ಇಂದು ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಇಂದು ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳದ್ದವು, ದೇವಿಯ ದರ್ಶನ ಪಡೆದ ಭಕ್ತಾದಿಗಳು  ತಮ್ಮ ಕಷ್ಟಗಳ ನಿವಾರಣೆಗೆ ಭಕ್ತಿಯಿಂದ ಬೇಡಿಕೊಂಡರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೆ ಇದೆ. ದರ್ಶನಕ್ಕಾಗಿ ದೇವಾಲಯದ ಆಡಳಿತ ಮಂಡಳಿ ಸಕಲ ಸಿದ್ದತೆ ಮಾಡಿಕೊಂಡಿದ್ದು ಲಕ್ಷ್ಮಿದೇವಿಗೆ ಹೋಮ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

ದರ್ಶನಕ್ಕಾಗಿ ವೃದ್ಧರು, ವಿಕಲ ಚೇತನರಿಗಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಭದ್ರತಾ ದೃಷ್ಟಿಯಿಂದ  ಠಾಣೆ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು.  ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಸಂತ್ರುಪ್ತರಾದರು.

 

ಫ್ರೆಶ್ ನ್ಯೂಸ್

Latest Posts

Featured Videos