ತೆಲುಗಿಗೆ ಡಬ್ ಆದ ‘ಕೃಷ್ಣ ತುಳಸಿ’

ತೆಲುಗಿಗೆ ಡಬ್ ಆದ ‘ಕೃಷ್ಣ ತುಳಸಿ’

ಬೆಂಗಳೂರು. ಏ. 29, ನ್ಯೂಸ್ ಎಕ್ಸ್ ಪ್ರೆಸ್: ಒಂದೆಡೆ ನಮ್ಮ ಚಿತ್ರಗಳು ಬೇರೆ ಕಡೆಗೆ ರಿಮೇಕ್ ಆಗುತ್ತವೆ ಹಾಗೆಯೇ ನಮ್ಮ ಭಾಷೆಗೆ ಪರಭಾಷೆಗಳ ಚಿತ್ರಗಳು ರಿಮೇಕ್ ಆಗುತ್ತವೆ. ಇದೊಂದು ಪದ್ದತಿಯಾದರೆ, ಇದೀಗ ಡಬ್ಬಿಂಗ್ ಸಹ ಶುರುವಾಗಿದೆ.

ಹೌದು, ಈಗಾಗಲೇ ಕನ್ನಡಕ್ಕೆ ಪರಭಾಷೆಯ ಅನೇಕ ಚಿತ್ರಗಳು ಡಬ್ ಆಗಿ ರಿಲೀಸ್ ಆಗುತ್ತಿವೆ. ಅದರಂತೆ ಕನ್ನಡದ ಚಿತ್ರಗಳು ಸಹ ಡಬ್ ಆಗಿ ತೆರೆ ಕಾಣುತ್ತಿವೆ. ಇದೀಗ ಕನ್ನಡದ ‘ಕೃಷ್ಣ ತುಳಸಿ’ ಚಿತ್ರವು ಸಹ ತೆಲುಗಿಗೆ ಡಬ್ ಆಗಿ ರಿಲೀಸ್ ಆಗಲು ಸಿದ್ದತೆ ನಡೆಸುತ್ತಿದೆ.

ಹೌದು, ಕಳೆದ ವರ್ಷ ತೆರೆ ಕಂಡು ಸೂಪರ್ ಹಿಟ್ ಆಗಿದ್ದ ‘ಕೃಷ್ಣ ತುಳಸಿ’ ಚಿತ್ರವು ತೆಲುಗಿನಲ್ಲಿ ‘ತುಳಸಿ ಕೃಷ್ಣ’ ಹೆಸರಿನಲ್ಲಿ ಡಬ್ ಆಗಿದ್ದು, ಮೇ 2 ರಂದು ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಸಂಚಾರಿ ವಿಜಯ್ ಅಂದನಾಗಿ ನಟಿಸಿದ್ದು, ಮೇಘಶ್ರೀ ನಾಯಕಿಯಾಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos