ತೆಲಂಗಾಣ ಪೊಲಿಸ್ ಜಿಂದಾಬಾದ್

ತೆಲಂಗಾಣ ಪೊಲಿಸ್ ಜಿಂದಾಬಾದ್

ಹೈದರಾಬಾದ್, ಡಿ. 06: ಪಶು ವೈದ್ಯೆ ದಿಶಾ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಇಂದು ನಸುಕಿನ ವೇಳೆ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ.

ದಿಶಾ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿಗಳನ್ನ ಎನ್ಕೌಂಟರ್ ಮಾಡಿ ಕೊಂದ ತೆಲಂಗಾಣ ಪೊಲೀಸರ ಬಗ್ಗೆ ಇಂದು ದೇಶದೆಲ್ಲೆಡೆ ಶ್ಲಾಘನೆ ವ್ಯಕ್ತವಾಗ್ತಿದೆ. “ತೆಲಂಗಾಣ ಪೊಲಿಸ್ ಜಿಂದಾಬಾದ್” ಎಂದು ಜನರು ಬಹುಪರಾಕ್ ಹಾಕ್ತಿದ್ದಾರೆ. ಎನ್ಕೌಂಟರ್ ನಡೆದ ಸ್ಥಳದಲ್ಲಿ ಪೊಲೀಸರ ಮೇಲೆ ಹೂವಿನ ಸುರಿಮಳೆ ಸುರಿದು, ಸಿಹಿ ತಿನ್ನಿಸಿ ತಮ್ಮ ಖುಷಿಯನ್ನ ವ್ಯಕ್ತಪಡಿಸುತ್ತಿದ್ದಾರೆ.

ಪಶುವೈದ್ಯೆ ದಿಶಾ ಮೇಲೆ 4 ಜನ ಕಿರಾತಕರು ಮೃಗಗಳಂತೆ ಎರಗಿ ಅತ್ಯಾಚಾರಗೈದು, ಕೊಲೆ ಮಾಡಿದ್ದರು. ನವೆಂಬರ್ 29ರಂದು ಈ ಸುದ್ದಿ ತಿಳಿದು ಇಡೀ ದೇಶ ಬೆಚ್ಚಿಬಿದ್ದಿತ್ತು. ಈ ಕಾಮುಕರನ್ನು ಗಲ್ಲಿಗೇರಿಸಿ ಎಂದು ದೇಶಾದ್ಯಂತ ಆಗ್ರಹ ಕೇಳಿಬಂದಿತ್ತು. ಅದ್ರಲ್ಲೂ ತೆಲಂಗಾಣ ಸರ್ಕಾರ ಹಾಗೂ ಪೊಲೀಸರ ಮೇಲೆ ಜನರು ಆಕ್ರೋಶಗೊಂಡಿದ್ದರು.

ನವೆಂಬರ್ 27-28ರ ಮಧ್ಯರಾತ್ರಿ ಪ್ರಿಯಾಂಕಾ ರೆಡ್ಡಿ ಕಾಣೆಯಾಗಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ತಡ ಮಾಡಿದ್ದಕ್ಕೆ ಸೈಬರಾಬಾದ್ ಪೊಲೀಸರು ಓರ್ವ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಸಿಬ್ಬಂದಿಯನ್ನ ಅಮಾನತು ಮಾಡಿದ್ದರು. ದಿಶಾಗೆ ನ್ಯಾಯ ಸಿಗಬೇಕು ಅಂತ ಪ್ರತಿಭಟಿಸಿದ್ದ ಜನರು, ಸಾದರಾಬಾದ್ ಪೊಲೀಸ್ ಠಾಣೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇಂದು ಜನರ ಆಗ್ರಹಕ್ಕೆ ಒಂದು ರೀತಿಯ ನ್ಯಾಯ ಸಿಕ್ಕಿದೆ. ಹೀಗಾಗಿ ಅದೇ ಜನರು ತೆಲಂಗಾಣ ಪೊಲೀಸರಿಗೆ ಬಹುಪರಾಕ್ ಹಾಕ್ತಾ ಸಂಭ್ರಮಪಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos