ತೇಜಸ್ವಿ ಸೂರ್ಯ ಅಧಿಕಾರ ದುರ್ಬಲಕೆ: ಶಂಕರ್ ಗುಹಾ

ತೇಜಸ್ವಿ ಸೂರ್ಯ ಅಧಿಕಾರ ದುರ್ಬಲಕೆ: ಶಂಕರ್ ಗುಹಾ

ಬೆಂಗಳೂರು: ಶ್ರೀ ಗುರು ರಾಘವೇದ್ರ ಕೋಆಪರೇಟಿವ್ ಬ್ಯಾಂಕಿನಲ್ಲಿ ಇರಿಸಿದ್ದ ಠೇವಣಿ ಕಳೆದುಕೊಂಡು ಸಂತ್ರಸ್ತರಾಗಿರುವವರ ಮೇಲೆ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಬೆಂಬಲಿಗರು ದೌಜನ್ಯ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಂಕರ್ ಗುಹಾ ಆರೋಪಿಸಿದ್ದಾರೆ.

ಠೇವಣಿದಾರರು ಬ್ಯಾಂಕಿನಲ್ಲಿ ಇರಿಸಿದ್ದ ಠೇವಣಿ ಹಣ ಕೇಳಿದರೆ ತೇಜಸ್ವಿ ಸೂರ್ಯ ಅವರು ಠೇವಣಿದಾರರನ್ನೇ ಗುಂಡಾಗಳು ಎಂದು ದೂಷಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಅವರು ಸುದ್ದಿಗಾರರೊಂದಿಗೆ ಹೇಳಿದರು. ಈ ಬ್ಯಾಂಕ್ ಗಳಲ್ಲಿ ಠೇವಣಿಗೆ ಹಿಡಿಸಿದ್ದ ಜನರ ಬದುಕು ಬೀದಿಗೆ ಬಂದಿದೆ. ಸಂಸದರಾಗಿ ನ್ಯಾಯ ದೊರಕಿಸಬೇಕಿದ್ದ ಇವರಿಗೆ ಈಗ ಅವ್ಯವಹಾರ ನಡೆಸಿದರ ಪರ ನಿಂತು ಠೇವಣಿದಾರರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

46 ಸಾವಿರ ಠೇವಣಿದಾರರನ್ನ ಹೊಂದಿರುವ ಈ ಪ್ರತಿಷ್ಟಿತ ಬ್ಯಾಂಕ್ ನಲ್ಲಿ ಸುಮಾರು 2400 ಕೋಟಿ ರೂಪಾಯಿಗಳ ಹಗರಣ ನಡೆದಿದ್ದು, ಅಂದರೆ  ಠೇವಣಿದಾರರ ಹಣವನ್ನು ಅನರ್ಹರಿಗೆ, ತಮ್ಮ ಸಂಬಂಧಿಕರಿಗೆ ಮತ್ತು ತಮಗೆ ಬೇಕಾದವರಿಗೆ ತೇಜಸ್ವಿ ಸೂರ್ಯ ಸಾಲ ಕೊಡಿಸಿದ್ದಾರೆ. ಈಗ ಸಾಲ ವಸೂಲಿ ಮಾಡಿ ಠೇವಣಿದಾರರ ಹಣ ವಾಪಸ್ ಮಾಡದೆ ಅಕ್ರಮ ನಡೆಸಿರುವವರನ್ನು ರಕ್ಷಣೆ ಮಾಡುವಲ್ಲಿ ತೇಜಸ್ವಿ ಸೂರ್ಯ ಯಶಸ್ವಿಯಾಗಿದ್ದಾರೆ. ಇದನ್ನು ಪ್ರಶ್ಸಿಸುವ ಠೇವಣಿದಾರರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಗುಹಾ ಹೇಳಿದ್ದಾರೆ.

ಕಳೆದ ಚುನಾವಣೆ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರು  ಠೇವಣಿದಾರರ ನಿರಂತರ ಸಭೆ ನಡೆಸಿ ಹಣ ಎಲ್ಲಿಯೂ ಹೋಗುದಿಲ್ಲ. ಯಾರಿಗೂ ಅನ್ಯಾಯ ಆಗುವುದಿಲ್ಲ. ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದ್ದರು. ಅಷ್ಟೇ ಅಲ್ಲ. ಈ ಬ್ಯಾಂಕ್ ನ ಪಿನ್ ಟೇಕ್ ಸಂಸ್ಥೆ ತೆಗೆದುಕೊಂಡು ಎಲ್ಲವನ್ನೂ ಸರಿಪಡಿತ್ತದೆ ಎಂದಿದ್ದರು. ಆದರೆ ಈಗ ಠೇವಣ ಹಣ ವಾಪಸ್ ಬರುವ ಬಗ್ಗೆ ಮಾತನಾಡುತ್ತಲೇ ಇಲ್ಲ. ಬದಲಾಗಿ ಠೇವಣಿದಾರರನ್ನೇ ತಪ್ಪಿತಸ್ತರು ಎನ್ನುವಂತೆ ಮಾತನಾಡುತ್ತಿದ್ದಾರೆ ಎಂದರು.

ಠೇವಣಿದಾರರ ಒತ್ತಾಯದಂತೆ ಗುರು ರಾಘವೇದ್ರ ಕೋಆಪರೇಟಿವ್ ಬ್ಯಾಂಕ್ ಹಗರಣದ ಸಿಐಡಿ ತನಿಖೆ ನಡೆದಿದ್ದು, ಇದರಲ್ಲಿ 1400 ಕೋಟಿ ಅಕ್ರಮ ನಡೆದಿದೆ ಎಂದು ಮಧ್ಯಂತರ ವರದಿಯೂ ಸರಕಾರಕ್ಕೆ ಸಲ್ಲಿಕೆಯಾಗಿತ್ತು.  ಆದರೂ ಈತನಕ ಯಾರನ್ನ ಬಂಧಿಸದಂತೆ ತೇಜಸ್ವಿ ಸೂರ್ಯ ಪ್ರಭಾವ ಬಳಸಿ ರಕ್ಷಿಸಿದ್ದಾರೆ ಎಂದು ಗುಹಾ ಆಪಾದಿಸುತ್ತಿದಾರೆ.

ಫ್ರೆಶ್ ನ್ಯೂಸ್

Latest Posts

Featured Videos