ಸಿಎಂ ಹೇಳಿಕೆಗೆ ಟಾಂಗ್‌ ನೀಡಿದ ತೇಜಸ್ವಿ ಸೂರ್ಯ

ಸಿಎಂ ಹೇಳಿಕೆಗೆ ಟಾಂಗ್‌ ನೀಡಿದ ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಅವರು ಸ್ಪರ್ಧಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿಯ ವ್ಯಾಪ್ತಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಶಾಸಕ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಸಂಸತ್ತಲ್ಲಿ ನಾನು ಮಾಡಿರುವ ಚರ್ಚೆಗಳ ಹಾಗೂ ಹಾಜರಾತಿಯ ಸಿಡಿಯನ್ನು ಸಿದ್ದರಾಮಯ್ಯನವರ ನಿವಾಸಕ್ಕೆ ತಲುಪಿಸುತ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ಲೇವಡಿ ಮಾಡಿದರು.

ನಿನ್ನೆ ಬೊಮ್ಮನಹಳ್ಳಿಯ ವ್ಯಾಪ್ತಿಯಲ್ಲಿ ಶಾಸಜ ಎಂ.ಸತೀಶ್ ರೆಡ್ಡಿಯವರು ಜೊತೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು,ಇತ್ತೀಚಿಗೆ ಸಿಎಂ ಸಿದ್ದರಾಮಯ್ಯನವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಪರವಾಗಿ ಪ್ರಚಾರ ಮಾಡುವ ವೇಳೆ ತೇಜಸ್ವಿ ಸೂರ್ಯ ಸಂಸತ್ತಿನಲ್ಲಿ ದ್ವನಿ ಎತ್ತಿಲ್ಲ ಮೋದಿ ಮುಂದೆ ಗಪ್ ಚುಪ್ ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದರು.

ಇದಕ್ಕೆ ಬೊಮ್ಮನಹಳ್ಳಿಯಲ್ಲಿ ಪ್ರಚಾರದ ವೇಳೆ ತಿರುಗೇಟು ನೀಡಿದ ತೇಜಸ್ವಿ ಸೂರ್ಯ ಸಿದ್ದರಾಮಯ್ಯನವರು  ಹಿರಿಯರಿದ್ದಾರೆ, ಒಮ್ಮೆ ನಾನು ಸಂಸತ್ತಿನಲ್ಲಿ ಮಾತಾಡಿರುವುದನ್ನು ಸಿಡಿ ಮಾಡಿ ಸಿದ್ದರಾಮಯ್ಯ ಅವರಿಗೆ ಮನೆಗೆ ಕಳಿಸುತ್ತೇನೆ, ರಾಜಕಾರಣದಲ್ಲಿ ಸಿದ್ದರಾಮಯ್ಯನವರು ಸುಳ್ಳು ಹೇಳುತ್ತಿದ್ದಾರೆ, ಹಿರಿಯರಾಗಿ ಸುಳ್ಳು ಹೇಳುವುದು ಸರಿಯಲ್ಲ ಸಂಸತ್ತಿನಲ್ಲಿ ಅತಿ ಹೆಚ್ಚು ಹಾಜರಾತಿ ನನ್ನದೇ ಇದೆ ಅತಿ ಹೆಚ್ಚು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದೇನೆ ಜೊತೆಗೆ ಎಲ್ಲಾ ಡಿಬೇಟ್ಗಳು ಮಾಡಿರುವ ದಾಖಲೆ ನನ್ನದಾಗಿದೆ ಸಿದ್ದರಾಮಯ್ಯನವರಿಗೆ ಈ ಬಗ್ಗೆ ಮಾಹಿತಿ ಇಲ್ಲ ಅಂತ ಅನಿಸುತ್ತಿದೆ ಹಾಗಾಗಿ ಅವರ ಮನೆಗೆ ಸಿಡಿ ಕಳಿಸಿ ಸತ್ಯವನ್ನು ತಿಳಿಸುವ ಕೆಲಸ ಮಾಡುತ್ತೇನೆ. ಜೊತೆಗೆ ಬೆಂಗಳೂರಿಗೆ ಸಬರ್ಬನ್ ರೈಲು ಮತ್ತು ಎಂಪಿ ಅನುದಾನವನ್ನು ಅತೀ ಹೆಚ್ಚು ಬಳಸಿರುವುದು ನನ್ನ ಸಾಧನೆ ಸಿದ್ದರಾಮಯ್ಯನವರು ನನ್ನ ಬಗ್ಗೆ ಸುಳ್ಳು ಮಾಹಿತಿ ನೀಡುವುದು ತಪ್ಪು ಒಮ್ಮೆ ದಾಖಲೆಗಳನ್ನು ಪರಿಶೀಲನೆ ಮಾಡಲಿ. ಈ ಬಾರಿ  ಅಭಿವೃದ್ಧಿ ಕೆಲಸ ನೋಡಿ ನನಗೆ ಮತ ಹಾಕುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಾಸಕ ಎಂ.ಸತೀಶ್ ರೆಡ್ಡಿ ಮಾತನಾಡಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಅಂತರದ ಲೀಡ್ ಬಿಜೆಪಿಗೆ ಕೊಡುತ್ತೇವೆ, ನಾವು ಮಾಡಿದ ಅಭಿವೃದ್ಧಿ ಕಾರ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಜನಪರ ಕಾಳಜಿ ಈ ಬಾರಿ ಸಂಪೂರ್ಣ ಬಿಜೆಪಿ ಕೈ ಹಿಡಿಯಲಿದ್ದು ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಈಗಾಗಲೇ ಜನ ಬೇಸತ್ತು ಹೋಗಿದ್ದು, ದೇಶದಲ್ಲಿ ಜನ ನೆಮ್ಮದಿಯ ಜೀವನವನ್ನು ನಡೆಸಬೇಕಾದರೆ ಮೋದಿಯವರ ಆಡಳಿತದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಎಂ ಸತೀಶ್ ರೆಡ್ಡಿ, ಬಿಜೆಪಿ ಮುಖಂಡರಾದ ನರೇಂದ್ರಬಾಬು, ಪಾಲಿಕೆ ಮಾಜಿ ಸದಸ್ಯ ಮಂಜುನಾಥ್ ರೆಡ್ಡಿ, ರವಿ,ಪುರುಷೋತ್ತಮ್, ಮುರಳೀದರ್,ಭಾಗ್ಯಲಕ್ಷ್ಮಿ ಮುರಳಿ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos