ತೇಜಸ್ವಿ ಸೂರ್ಯ ರವರಿಗೆ ಮತ ನೀಡಿದರೆ, ಮೋದಿಗೆ ಮತ ಹಾಕಿದಂತೆ

ತೇಜಸ್ವಿ ಸೂರ್ಯ ರವರಿಗೆ ಮತ ನೀಡಿದರೆ, ಮೋದಿಗೆ ಮತ ಹಾಕಿದಂತೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಅವರು ಕಣಕ್ಕಿಳಿದರೆ ಅವರ ವಿರುದ್ಧವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೌಮ್ಯ ರೆಡ್ಡಿ ಅವರು ಸ್ಪರ್ಧಿಸುತ್ತಿದ್ದಾರೆ.

ಗಡಿಭಾಗದಲ್ಲಿ ನಮ್ಮನ್ನು ಕಾಯುತ್ತಿರುವ ಸೈನಿಕರ ಶಕ್ತಿ ಬಲಪಡಿಸಬೇಕೆಂದಾದರೆ, ಅದು ಮತ್ತೊಮ್ಮೆ ಮೋದಿಯಿಂದ ಮಾತ್ರ ಸಾಧ್ಯ. ಇಂದು ಚೈನಾ, ಪಾಕಿಸ್ತಾನ, ಇನ್ನಿತರೇ ದೇಶಗಳಿಗೆ ಪ್ರತ್ಯುತ್ತರ ನೀಡಲು ಸೈನಿಕರನ್ನು ಬಲಪಡಿಸಿದ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಗೆಲ್ಲಿಸಲು ದೇಶದೆಲ್ಲೆಡೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ನುಡಿದರು.

ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಬೊಮ್ಮನಹಳ್ಳಿ, ರೂಪೇನ ಅಗ್ರಹಾರ, ವಿರಾಟನಗರಗಳಲ್ಲಿ ಮತಯಾಚನೆ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ ಅವರು, ನರೇಂದ್ರ ಮೋದಿಯವರನ್ನು ನಮ್ಮ ಭಾಗದಿಂದ ಅತ್ಯಂತ ದೊಡ್ಡ ಬಹುಮತದೊಂದಿಗೆ ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿಸುವುದು ನಮ್ಮೆಲ್ಲರ ಕರ್ತವ್ಯ. ಇಂದು ದೇಶದ ಯಾವುದೇ ಮೂಲೆಗೋದರೂ ಸಹ ಮತ್ತೊಮ್ಮೆ ಮೋದಿಯವರನ್ನು ಗೆಲ್ಲಿಸಬೇಕೆಂಬುದು ಜನರ ಒಮ್ಮತದ ಮನಸ್ಸಾಗಿದೆ. ಮತ್ತೆ ಮೋದಿ ಯಾಕೆ ಎಂಬ ಪ್ರಶ್ನೆಗೆ ನೂರಾರು ಜನ ನೂರಾರು ಕಾರಣಗಳನ್ನು ನೀಡುತ್ತಾರೆ. ಗೋವಿಂದರಾಜನಗರದ ಉದ್ಯಾನವನದಲ್ಲಿ ನಾನು ಕರಪತ್ರ ಹಂಚುತ್ತಿದ್ದಾಗ, ಮುಂದಿನ ಭವಿಷ್ಯಕ್ಕಾಗಿ ಮೋದಿ ಎಂದು ಯುವಕ ಹೇಳಿದ ಮಾತು ಎಲ್ಲರಿಗೂ ಪ್ರೇರಣೆಯಾಯಿತು. ಈ ಮಾತು ಅಕ್ಷರಶಃ ಸತ್ಯ.

ದೇಶದ ಇತಿಹಾಸದಲ್ಲಿಯೇ ಮಹಿಳೆಯರಿಗಾಗಿಯೇ ಪರಿಶ್ರಮಿಸಿದವರಲ್ಲಿ ಮೊದಲಿಗರು ಮೋದಿ. ಯಾರನ್ನೇ ಕೇಳಿದರೂ, ಮೋದಿ, ಮೋದಿ ಎಂದು ಹೇಳುತ್ತಿರುವುದು ಕೇವಲ ಬಾಯಿ ಮಾತಿಗಲ್ಲ. ಒಬ್ಬ ಸಮರ್ಥ ನಾಯಕನಿಂದ ಮಾತ್ರ ದೇಶ ಮುನ್ನಡೆಸಲು ಸಾಧ್ಯವೆಂದು ನುಡಿದರು. ನಮ್ಮ ಹೆಮ್ಮೆಯ ಕಾಶ್ಮೀರದಲ್ಲಿ ಇಂದು ನಮ್ಮ ತ್ರಿವರ್ಣ ಧ್ವಜ ಹಾರುತ್ತಿರಲು ಕಾರಣವೇ ನರೇಂದ್ರ ಮೋದಿ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಸತೀಶ್ ರೆಡ್ಡಿಯವರು ನುಡಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಮತಯಾಚನೆ ವೇಳೆ ಮಾತನಾಡಿದ ಎಂ. ಸತೀಶ್ ರೆಡ್ಡಿಯವರು ಕಳೆದ ೧೦ ವರ್ಷಗಳಿಂದ ದೇಶದಲ್ಲಿರುವಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಿದವರು ನರೇಂದ್ರ ಮೋದಿಯವರು. ಅದರಲ್ಲೂ ಪ್ರಮುಖವಾಗಿ, ಕಾಶ್ಮೀರದಲ್ಲಿ ಪಾಕ್ತಿಸ್ಥಾನದ ಧ್ವಜ ಹಾರಿಸುತ್ತಾ, ನಮ್ಮ ತ್ರಿವಣ ಧ್ವಜ ಹಾರಿಸಲು ಭಯ ಪಡುತ್ತಿದ್ದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370ನ್ನು ರದ್ದು ಮಾಡಿ, ನಮ್ಮ ತ್ರಿವರ್ಣ ಧ್ವಜ ಹಾರಿಸುವಂತೆ ಮಾಡಿದ ಸಂಪೂರ್ಣ ಯಶಸ್ಸು ಮೋದಿಯವರಿಗೆ ಸಲ್ಲುತ್ತದೆ.

“ಮತ್ತೊಮ್ಮೆ ಮೋದಿ” ಪ್ರಧಾನಿಯಾಗಬೇಕಾದರೇ, ನಾವು ನೇರವಾಗಿ ತೇಜಸ್ವಿ ಸೂರ್ಯರವರಿಗೆ ಮತ ನೀಡಿದರೇ, ಅದು ಮೋದಿಯವರಿಗೆ ಮತ ಹಾಕಿದಂತೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ನರೇಂದ್ರ ಮೋದಿಯವರ ಸಾಧನೆಗೆ ಕಾರಣ, ನೀವು ಹಾಕಿದ ಮತವೇ ಕಾರಣ. ಈ ಭಾರಿ ನೀವು ಹಾಕುವ ಮತದಿಂದಾಗಿ ಕೇಂದ್ರದಲ್ಲಿ ಬಿಜೆಪಿ ೪೦೦ ಸ್ಥಾನ ಗೆಲ್ಲುವಂತಾಗಬೇಕು.

ನಿಮ್ಮ ಹಾಗೂ ನಿಮ್ಮ ಬಂಧು ಬಳಗದವರು, ಸ್ನೇಹಿತರ ಮತಗಳನ್ನು ಬಿಜೆಪಿಗೆ ನೀಡಿ ಈ ಭಾರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಮತ್ತೊಮ್ಮೆ ಬಿಜೆಪಿಯ ಭದ್ರಕೋಟೆ ಎಂಬುದನ್ನು ನಿರೂಪಿಸಿ, ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿಗೆ ನೀಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಮಂಜುನಾಥ ರೆಡ್ಡಿ, ಬಿಜೆಪಿ ಕಾರ್ಯಕರ್ತರು ಇತರರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos