ಹಂಪಿ ವಿವಿಯ ಬೆಳ್ಳಿ ಹಬ್ಬದ ಸಮಾರೋಪಕ್ಕೆ ವಿಶ್ವೇಶ್ವರ ಭಟ್ ಆಹ್ವಾನಕ್ಕೆ ಅಧ್ಯಾಪಕರ ವಿರೋಧ

ಹಂಪಿ ವಿವಿಯ ಬೆಳ್ಳಿ ಹಬ್ಬದ ಸಮಾರೋಪಕ್ಕೆ ವಿಶ್ವೇಶ್ವರ ಭಟ್ ಆಹ್ವಾನಕ್ಕೆ ಅಧ್ಯಾಪಕರ ವಿರೋಧ

ಕುಲಪತಿ ಮಲ್ಲಿಕಾ ಘಂಟಿ ಅವರಿಗೆ ಪತ್ರ ಬರೆದು ತಾತ್ವಿಕ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ವಿವಿ ಅಧ್ಯಾಪಕರು

ಬಳ್ಳಾರಿ: ಫೆಬ್ರವರಿ 1ರಂದು ಹಂಪಿ ವಿಶ್ವವಿದ್ಯಾಲಯದಲ್ಲಿ
ನಡೆಯಲಿರುವ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭಕ್ಕೆ ಪತ್ರಕರ್ತ ವಿಶ್ವೇಶ್ವರ ಭಟ್‍ ರನ್ನು ಆಹ್ವಾನಿಸಿದ್ದನ್ನು
ವಿವಿಯ ಅಧ್ಯಾಪಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಇಂದು ಕುಲಪತಿ ಮಲ್ಲಿಕಾ ಘಂಟಿ ಅವರಿಗೆ ಪತ್ರ ಬರೆದ ಅಧ್ಯಾಪಕರು, ವಿಶ್ವೇಶ್ವರ ಭಟ್ ಮಹಿಳೆಯರನ್ನು ಕುರಿತು ಅಗೌರವ ತೋರುವ ಬರಹಗಳನ್ನು ಬರೆಯುತ್ತಾ ಬಂದಿದ್ದಾರೆ. ಇಂತವರನ್ನು ಮಹತ್ವವಾದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭಕ್ಕೆ ಆಹ್ವಾನಿಸಿರುವುದು ಉಚಿತವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೇ ಕನ್ನಡ
ವಿಶ್ವವಿದ್ಯಾಲಯದ ಹೆಮ್ಮೆಯ ಕುಲಪತಿಗಳಾಗಿದ್ದ ಡಾ.ಎಂ.ಎಂ.ಕಲಬುರ್ಗಿ ಅವರ ವಿಷಯದಲ್ಲಿ ತಮ್ಮ ಪತ್ರಿಕೆಯಲ್ಲಿ
ಹೀನಾಯವಾಗಿ ಬರೆದಿದ್ದಾರೆ. ಇಂತಹ ವ್ಯಕ್ತಿಗೆ ಆಹ್ವಾನ ಸೂಕ್ತವಲ್ಲ. ಇದರಿಂದ ವಿಶ್ವವಿದ್ಯಾಲಯ ಸಾರ್ವಜನಿಕ
ಆಕ್ರೋಶವನ್ನು ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇದರಿಂದ ನಮಗೆ ಮುಜುಗರವಾಗಿದೆ. ಭಟ್‍ರನ್ನು
ಆಹ್ವಾನಿಸಿರುವುದಕ್ಕೆ ಅಧ್ಯಾಪಕರಾದ ನಾವು ನಮ್ಮ ತಾತ್ವಿಕ ಭಿನ್ನಮತವನ್ನು ದಾಖಲಿಸುತ್ತಿದ್ದೇವೆ ಎಂದು
ಅಧ್ಯಾಪಕರು ಪತ್ರದಲ್ಲಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಪತ್ರದಲ್ಲಿ ಅಧ್ಯಾಪಕರಾದ ರೆಹಮತ್ ತರಿಕೇರಿ, ಅಮರೇಶ್ ನುಗಡೋಣಿ, ಮೊಗಳ್ಳಿ ಗಣೇಶ್, ಮೋಹನಕೃಷ್ಣ, ಗಂಗಾಧರ, ಸಿ.ಟಿ.ಗುರುಪ್ರಸಾದ್‍, ಎಂ.ಉಷಾ, ಶಿವಾರೆಡ್ಡಿ ಕೆ.ಸಿ. ಸೇರಿದಂತೆ ಅನೇಕರು ಸಹಿಗಳನ್ನು ಹೊಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos