ಶಿಕ್ಷಕರ ತರಬೇತಿ ಕೇಂದ್ರ ಸ್ಥಳಾಂತರ ಗೊಂಡಿಲ್ಲ!?

ಶಿಕ್ಷಕರ ತರಬೇತಿ ಕೇಂದ್ರ ಸ್ಥಳಾಂತರ ಗೊಂಡಿಲ್ಲ!?

ದೇವನಹಳ್ಳಿ, ಜು.13 : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಕಚೇರಿಗಳು ದೇವನಹಳ್ಳಿ ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ ಬಳಿ ಇರುವ ಜಿಲ್ಲಾ ಸಂಕೀರ್ಣ ಕ್ಕೆ ಸ್ಥಳಾಂತರ ಗೊಂಡರೂ ಸಹ ಬೆಂಗಳೂರು ನಗರದಲ್ಲಿಯೇ ಇರುವ ಶಿಕ್ಷಕರ ತರಬೇತಿ ಕೇಂದ್ರ ಈ ವರೆಗೆ ಸ್ಥಳಾಂತರ ವಾಗದ ಹಿನ್ನಲೆಯಲ್ಲಿ ತರಬೇತಿಗೆ ನಿಯೋಜಿಸುವ ವಿಷರವಾರು ಶಿಕ್ಷಕರು ಪರದಾಡುವಂತೆ ಸ್ಥಿ ತಿ ನಿರ್ಮಾಣ ವಾಗಿದೆ.

2018 ಅಕ್ಡೋಬರ್ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿದ್ದ ಜಿಲ್ಲಾಡಳಿತ ಕಚೇರಿ ಹಾಗೂ ನಗರದ ವಿವಿಧೇಡೆ ಹಂಚಿಕೊಂಡು ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳು ಹಮತ ಹಂತವಾಗಿ ಸ್ಥಳಾಂತರವಾಗಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ಆದರೆ ಡಯಟ್ ಜಿಲ್ಲಾ ಕೇಂದ್ರ ಬೆಂಗಳೂರಿನ ರಾಜಾಜೀನಗರದಲ್ಲೇ ಇರುವುದರಿಂದ 4 ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಡಶಾಲಾ ವಿಷಯವಾರು ಶಿಕ್ಷಕರಿಗೆ ತೊಂದರೆ ಆಗುತ್ತಿದೆ. ಕೂಡಲೇ ಡಯಟ್ ಜಿಲ್ಲಾ ಕೇಂದ್ರ  ಸ್ಥಳಾಂತರ ವಾಗಬೇಕೆಂಬ ಶಿಕ್ಷಕರ ಒತ್ತಾಯವಾಗಿದೆ.

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಡಶಾಲಾ ಶಿಕ್ಷರ ಸಂಖ್ಯೆ ಜಿಲ್ಲೆಯಲ್ಲಿ ಕನಿಷ್ಠ 4 ಸಾವಿರವಿದೆ. ಪ್ರೌಡಶಾಲಾ ಶಿಕ್ಷಕರಿಗೆ ಆಯಾ ತಾಲೂಕಿನಲ್ಲಿ ಡಯಟ್ ವಿಷಯವಾರು ಶಿಕ್ಷಣಾಧಿಕಾರಿಗಳು ಬೋಧನಾ ತರಬೇತಿ ನೀಡುತ್ತಾರೆ. ಪ್ರಾಥಮಿಕ ಶಿಕ್ಷಕರಿಗೆ ಹೆಚ್ಚಿನ ತರಬೇತಿ ನೀಡುಲಾಗುತ್ತಿದೆ. ತರಬೇತಿಗಾಗಿಯೇ ಹೆಚ್ಚುವರಿ ಭತ್ಯೆ ನೀಡುವುದಿಲ್ಲ. ನಗರಕ್ಕೆ ಪ್ರತಿ ತರಬೇತಿ ಪಡೆದು ವಾಪಾಸ್ ಆಗುವುದು ನರಕ ಯಾತನೆ ಆಗುವುದು. ಮನೆಯಲ್ಲಿ ವೃದ್ಧರು ಚಿಕ್ಕ ಮಕ್ಕಳನ್ನು ಬಿಟ್ಟು ತರಬೇತಿಗೆ ಹೋಗಬೇಕು ಅಸಹಾಯಕ ಸ್ಥಿತಿ ಯಲ್ಲಿ ಇದ್ದೇವೆ ಎಂದು ಶಿಕ್ಷಕರು ಹೇಳುತ್ತಾರೆ.

ಜಿಲ್ಲಾಡಳಿತ ಭವನದಲ್ಲಿ 2 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಏಕ ಕಾಲದಲ್ಲಿ ತರಬೇತಿ ನೀಡಲು 50 ಕಂಪ್ಯೂಟರ್ ಗಳು ಇವೆ. ಡಯಟ್ ಆಡಳಿತಾತ್ಮಕವಾಗಿ ಕೆಲಸ ನಿರ್ವಹಿಸಲು ಸಾಕಾಗುವುದು. ಅದು ತರಬೇತಿಗೆ ಸಾಲದು ಜಿಲ್ಲಾಡಳಿತ ಭವನದ ಪಕ್ಕದಲ್ಲಿ 4 ಎಕರೆಯ ಜಾಗವನ್ನು ಡಯಟ್ ಕೇಂದ್ರಕ್ಕಾಗಿ ಸರ್ಕಾರದಿಂದ ನೀಡಲಾಗಿ ಎಂದು ಅಧಿಕಾರಿಗಳು ಹೇಳುತ್ತಾರೆ.

ಶಿಕ್ಷಕರು ವಾರ್ಷಿಕವಾಗಿ 5 ರಿಂದ 15 ದಿನಗಳ ವರೆಗೆ ತರಬೇತಿ ಗಳನ್ನು ಹಮ್ಮಿಕೊಳ್ಳಲಾಗುವುದು. ಒಂದು ಬಾರಿ ತರಬೇತಿಗೆ 150 ರಿಂದ 200 ಶಿಕ್ಷಕರು ಬೆಂಗಳೂರಿನ ಡಯಟ್ ಕೇಂದ್ರಕ್ಕೆ ಹೋಗಬೇಕು. ಇದು ಇಡೀ ವರ್ಷ ನಡೆಯುವ ತರಬೇತಿ ಪ್ರಕ್ರಿಯೆ ಆಗಿದೆ. ಬೆಳ್ಳಗಿನ ವೇಳೆ ಸರಿಯಾದ ಸಮಯಕ್ಕೆ ತರಬೇತಿಗೆ ಹೋಗಲು ಕಷ್ಟ ವಾಗುತ್ತಿದೆ. ವಾಹನಗಳ ದಟ್ಟಣೆಯಿಂದಾಗಿ ಹೋಗಿ ಬರುವುದು ಕಷ್ಟ. ಒಂದು ದಿನ ಪೂರ್ತಿ ಸಮಯ ವ್ಯರ್ಥ ವಾಗುವುದು. ಇದರಿಂದ ಹೆಚ್ಚಿನ ಸಮಸ್ಯೆ ಆಗುತ್ತಿದೆ

ಆಂಜನಪ್ಪ ಶಿಕ್ಷಕ

ಜಿಲ್ಲೆಯಲ್ಲಿ 3107 ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರಿದ್ದಾರೆ. ಒಟ್ಟು 3789 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮದು ತರಬೇತಿ ನೀಡುವುದಲ್ಲ. ಶೈಕ್ಷಣಿಕ ಆಡಳಿತಾತ್ಮಕ ಕೆಲಸ ಮಾತ್ರ ಆಗಿದೆ.

ಕೃಷ್ಣ ಮೂರ್ತಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ

ಡಯಟ್ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಬೇಕು. ನಮ್ಮದು ತರಬೇತಿ ನೀಡುವ ಕೆಲಸ ಮಾತ್ರ ಆಗಿದೆ. ಆಡಳಿತಾತ್ಮಕವಾಗಿ ಸ್ಥಳಾಂತರ ಮಾಡಿಕೊಳ್ಳಿ ಎಂದು ಆದೇಶ ನೀಡಿದರೆ ತಕ್ಷಣವೇ ಸ್ಥಳಾಂತರ ಮಾಡುತ್ತೇವೆ. ಅಂತಿಮ ತೀರ್ಮಾನ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ತೆಗೆದುಕೊಳ್ಳಬೇಕು.

 

ಫ್ರೆಶ್ ನ್ಯೂಸ್

Latest Posts

Featured Videos