‘ಟಿಡಿಆರ್ ಕಿಂಗ್ ಪಿನ್’ ಕೃಷ್ಣಲಾಲ್ ಗುಳುಂ ದಂಧೆ ಬಿಚ್ಚಿಟ್ಟ ಎಸಿಬಿ!

‘ಟಿಡಿಆರ್ ಕಿಂಗ್ ಪಿನ್’ ಕೃಷ್ಣಲಾಲ್ ಗುಳುಂ ದಂಧೆ ಬಿಚ್ಚಿಟ್ಟ ಎಸಿಬಿ!

ಬೆಂಗಳೂರು, ಏ. 26, ನ್ಯೂಸ್ ಎಕ್ಸ್ ಪ್ರೆಸ್: ಸಿಲಿಕಾನ್​ ಸಿಟಿಯ ಹಲವೆಡೆ ಇಂದು ಎಸಿಬಿ ದಾಳಿ ನಡೆದಿದೆ. ಬಿಡಿಎ ಅಧಿಕಾರಿ ಕೃಷ್ಣಲಾಲ್​ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ಹಲವು ಮಾಹಿತಿಗಳನ್ನ ಅಧಿಕಾರಿಗಳು ಕಲೆಹಾಕಿದ್ದಾರೆ ಎನ್ನಲಾಗ್ತಿದೆ. ಕೃಷ್ಣಲಾಲ್ ಕುರಿತ ಡಿಟೇಲ್ಸ್ ಇಲ್ಲಿದೆ​… ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ನಗರದ ಹಲವೆಡೆ ದಾಳಿ ನಡೆಸಿದ್ದಾರೆ. ಮುಖ್ಯವಾಗಿ ಬಿಡಿಎ ಅಧಿಕಾರಿ ಕೃಷ್ಣಲಾಲ್​ನನ್ನ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ದಾಳಿ ನಡೆಸಿದ ಕೃಷ್ಣಲಾಲ್ ಹಿನ್ನೆಲೆ ನೋಡ್ತಾ ಹೋದ್ರೆ, ಇವರು 2010ರಲ್ಲಿ ಬಿಬಿಎಂಪಿಗೆ ಬಂದಿರುವ ಅಧಿಕಾರಿ. ನಂತರ ಕೃಷ್ಣಲಾಲ್ ಬೆನ್ನಿಗೆ ಸಾಕಷ್ಟು ಕಾರ್ಪೊರೇಟರ್ಸ್ ನಿಂತಿದ್ದರು. ಟಿಡಿಆರ್ ಎಂದಾಗಲೆಲ್ಲಾ ಅವರಿಗೆ ನೆನಪಾಗ್ತಿದ್ದಿದ್ದೇ ಈ ಕೃಷ್ಣಲಾಲ್ ಎಂದು ಹೇಳಲಾಗ್ತಿದೆ. 2006ರಿಂದ ಈವರೆಗೂ ಕೌದೇನಹಳ್ಳಿ, ಭಟ್ಟರಹಳ್ಳಿ ರಸ್ತೆ ಅಗಲೀಕರಣದಲ್ಲಿ ನೂರಾರು ಕೋಟಿ ಲೂಟಿ ಮಾಡಿದ್ದಾರೆ. ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ಎಲ್ಲಾ ಟಿಡಿಆರ್ ಕಡತಗಳನ್ನು ಇವರೇ ನೋಡ್ತಿದ್ದರು. ಆದರೆ, ಬಿಬಿಎಂಪಿ ಅಧಿಕಾರಿಯಾಗಿದ್ದವರನ್ನು ಬಿಡಿಎಗೆ ವರ್ಗಾವಣೆ ಮಾಡಲು ಸಾಧ್ಯವೇ ಇಲ್ಲ. ಆದರೂ ಡಿಸಿಎಂ‌ ಪರಮೇಶ್ವರ್ ಮೇಲೆ ಪ್ರಭಾವ ಬೀರಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೀಗೆ ಹತ್ತಾರು ಆರೋಪಗಳು ಕೃಷ್ಣಲಾಲ್​ ವಿರುದ್ಧ ಕೇಳಿಬಂದಿವೆ. ಇನ್ನು ಎಸಿಬಿಯ ಎಸಿಪಿಯವರು ಕೃಷ್ಣಲಾಲ್​ಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳನ್ನ ಬಹಿರಂಗಪಡಿಸಿದ್ದಾರೆ. ಕೃಷ್ಣಲಾಲ್​ ಅಧಿಕಾರ ದುರುಪಯೋಗಪಡಿಸಿಕೊಂಡು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿದ ಸೈಟ್ ಮತ್ತು ಬಿಲ್ಡಿಂಗ್​ಗ​ಳ ಜಾಗಕ್ಕೆ ಹೆಚ್ಚು ಬೆಲೆ ನಿಗದಿ ಮಾಡಿಕೊಳ್ಳುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡಿದ್ದಾರೆ. ಅವರಿಗೆ ಸಂಬಂಧಿಸಿದ 6 ಜಾಗಗಳಲ್ಲಿ ಶೋಧ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಕೃಷ್ಣಲಾಲ್​ಗೆ ಸಂಬಂಧಿಸಿದ ಸಂಜಯನಗರ ನಿವಾಸ, ಮಹದೇವಪುರ ಕಚೇರಿ, ಬಿಡಿಎ ಕಚೇರಿ, ದೀಪಕ್ ಕುಮಾರ್ ಅವರ ಟೆಲಿಕಾಂ ಲೇಔಟ್ ನಗರದ ವಾಸ ಮನೆ, ಅಮಿತ್ ರಿಕಬ್ ಚಂದ್ ವಾಸದ ಮನೆ ಹಾಗೂ ಕಚೇರಿಯಲ್ಲಿ ದಾಳಿ ಮುಂದುವರೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos