ಲಾಭದತ್ತ ಟಿಸಿಎಂ ಎಕ್ಸ್ ಪ್ರೆಸ್

 ಲಾಭದತ್ತ ಟಿಸಿಎಂ ಎಕ್ಸ್ ಪ್ರೆಸ್

ಬೆಂಗಳೂರು:   ಹೆಸರಾಂತ ಸರಕು ಸಾಗಣೆ ಸಂಸ್ಥೆಯಾದ  ಟಿಸಿಎಂ ಎಕ್ಸ್  ಪ್ರೆಸ್ ಲಿಮಿಟೆಡ್ 2019ರ 2ನೇ ತ್ರೈ ಮಾಸಿಕದಲ್ಲಿ ಶೇ. 9.3 ರಷ್ಟು ಆದಾಯ  ಮತ್ತು ಶೇ. 60.6 ಲಾಭ ದಾಖಲಿಸಿದೆ.

ಈ ತ್ರೈ ಮಾಸಿಕದಲ್ಲಿ 271  ಕೋಟಿ ರೂ.  ಕಾರ್ಯಾಚರಣೆ  ಆದಾಯವನ್ನುಗಳಿಸಿದರೆ ಇದೇ ಅವಧಿಯ ಹಿಂದಿನ ವರ್ಷದಲ್ಲಿ 248 ರೂ.ಆದಾಯ ಗಳಿಸಿತ್ತು. ಹಣಕಾಸು ವರ್ಷ 2020 ರ  ಎರಡನೇ ತ್ರೈ ಮಾಸಿಕದಲ್ಲಿ 26 ಕೋಟಿ ರೂ. ಲಾಭವನ್ನು ಗಳಿಸಿದೆ. ಇದೇ ಸಮಯದಲ್ಲಿ  ಕಳೆದ ವರ್ಷ ಸಂಸ್ಥೆಯು 16 ಕೋಟಿ ರೂ. ಲಾಭಗಳಿಸಿತ್ತು.  ಈ ಮೂಲಕ ಸಂಸ್ಥೆಯು 60.6 ಷ್ಟು ಬೆಳವಣಿಗೆ ಕಂಡಿದೆ.

ಲಾಭದ ಮಾರ್ಜಿನ್ ಹಣಕಾಸು ವರ್ಷ 2020 ರಲ್ಲಿ ಶೇ. 9.6 ದಾಖಲಿಸಿದರೆ ಇದೇ ಸಂದರ್ಭದಲ್ಲಿ ಕಳದೆ ವರ್ಷದ ಶೇ. 6.6 ದಾಖಲಿಸಿತ್ತು. ಆಡಳಿತ ಮಂಡಳಿಯು 1.5 ರೂ ಪ್ರತಿ ಷೇರಿಗೆ ಇಂಟಿರಿಮ್ ಡಿವಿಡೆಂಟ್ ಘೋಷಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos