ಒಳಚರಂಡಿ ಕಾಮಗಾರಿ ವೀಕ್ಷಿಸಿದ ಟಿಬಿಜೆ

ಒಳಚರಂಡಿ ಕಾಮಗಾರಿ ವೀಕ್ಷಿಸಿದ ಟಿಬಿಜೆ

ಶಿರಾ: ನಗರ ದಿನೇ ದಿನೆ ಅಭಿವೃದ್ಧಿಯಾಗುತ್ತಿದ್ದು, ಮೂಲ ಭೂತ ಸೌಕರ್ಯಗಳ ಅಗತ್ಯತೆ ಹೆಚ್ಚಿದೆ. ಇದನ್ನು ಗಮನದಲ್ಲಿಟ್ಟುಕೊಂಡು ೨೦೧೦-೧೧ನೇ ಸಾಲಿನಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಮಂಜೂರಾತಿ ಮಾಡಿಸಿದ್ದೆ. ಈಗ ಅದರ ಕಾಮಗಾರಿ ಶೇ. ೯೦ರಷ್ಟು ಮುಗಿದಿದ್ದು, ಬರುವ ಫೆಬ್ರವರಿ ವೇಳೆಗೆ ಚಾಲನೆಗೊಳ್ಳುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ನುಡಿದರು.

ಕಲ್ಲುಕೋಟೆ ಬಳಿ ನಿರ್ಮಾಣಗೊಳ್ಳುತ್ತಿರುವ ಒಳಚರಂಡಿ ಸಂಸ್ಕರಣಾ ಘಟಕದ ಕಾಮಗಾರಿ ವೀಕ್ಷಣೆ ನಡೆಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಸುಮಾರು ೪೨.೩೬ ಕೋಟಿ ಅಂದಾಜು ಮೊತ್ತದ ಕಾಮಗಾರಿ ಪೈಕಿ, ನಗರಾದ್ಯಂತ ನೂರು ಕಿ.ಮೀ.ಗೂ ಹೆಚ್ಚಿನ ಉದ್ದದ ಒಳಚರಂಡಿ ಪೈಪ್‌ಲೈನ್ ಕಾಮಗಾರಿ, ಮ್ಯಾನ್ ಹೋಲ್ ನಿರ್ಮಾಣ ಈಗಾಗಲೇ ಮುಗಿದಿದ್ದು, ಮನೆಗಳ ಸಂಪರ್ಕ ಕೊಡುವುದೊಂದೇ ಬಾಕಿ ಇದೆ. ಅದಕ್ಕೆ ಪೂರಕವಾಗಿ ನಗರದ ಎರಡು ಭಾಗದಲ್ಲಿ ಸಂಸ್ಕರಣಾ ಘಟಕಗಳು ನಿರ್ಮಾಣಗೊಳ್ಳುತ್ತಿವೆ.

ಅದರಲ್ಲಿ ಚಂಗಾವರ ರಸ್ತೆಯ ಬಳಿಯ ಘಟಕ ಪೂರ್ಣಗೊಂಡಿದ್ದು, ಇದು ಮುಕ್ತಾಯದ ಹಂತದಲ್ಲಿದೆ. ಇನ್ನೆರಡು ತಿಂಗಳಲ್ಲಿ ಯಂತ್ರೋಪಕರಣ ಅಳವಡಿಕೆ ಕಾರ್ಯವೂ ಮುಗಿದ ನಂತರ ಘಟಕ ಕಾರ್ಯಾರಂಭ ಮಾಡಲಿದೆ. ಚಂಗಾವರ ರಸ್ತೆಯ ಘಟಕದಿಂದ ಇಲ್ಲಿಗೆ ತ್ಯಾಜ್ಯವನ್ನು ಪಂಪ್ ಮಾಡಿ, ಎರಡರ ಶುದ್ಧೀಕರಣ ಇಲ್ಲಿಯೇ ಆಗಲಿದೆ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos