ತಾಯಿಗಾಗಿ ಜರ್ಮನ ಶಿಕ್ಷಕಿ ಹುಡುಕಾಟ

ತಾಯಿಗಾಗಿ ಜರ್ಮನ ಶಿಕ್ಷಕಿ ಹುಡುಕಾಟ

ರಾಯಚೂರು, ಜು.22 : 40 ವರ್ಷದ ಹಿಂದೆ ದೂರವಾದ ತಾಯಿಗಾಗಿ ಭಾರತೀಯ ಮೂಲದ ಜರ್ಮನಿ ಶಿಕ್ಷಕಿ ರಾಯಚೂರಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಮಂಗಳೂರು ಸಮೀಪದ ಉಳ್ಳಾಲದಲ್ಲಿ ವಾಸವಿದ್ದ ತಾಯಿ, ಇದೀಗ ರಾಯಚೂರು ಜಿಲ್ಲೆಯಲ್ಲಿ ಇರುವುದಾಗಿ ಮಾಹಿತಿಯಿದೆ ಎನ್ನುವ ಡಾ.ಮರಿಯಾ ಛಾಯಾ ಶ್ಚುಪ್, ಈ ಹುಡುಕಾಟದಲ್ಲಿ ನಾಗರಿಕರ ಸಹಾಯ ಕೋರಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ತಾಯಿ ಗಿರಿಜಾ ಗಾಣಿಗ ನಾನು 6 ವರ್ಷ ದವಳಿದ್ದಾಗ ಜರ್ಮನಿಯ ಶ್ಚುಪ್ ದಂಪತಿಗೆ ದತ್ತು ನೀಡಿದ್ದರು. ತಾಯಿ ಮಮತೆಯಿಂದ ದೂರವಾಗಿರುವ ನಾನು ಮರಳಿ ಅವಳನ್ನು ಪಡೆಯಲು ಭಾರತಕ್ಕೆ ಬಂದಿರುವೆ. 2006ರಿಂದ ತಾಯಿಯ ಹುಡುಕಾಟ ನಡೆದಿದೆ. ಈ ಬಗ್ಗೆ ಹೈಕೋರ್ಟ್ನಲ್ಲೂ ದಾವೆ ಹಾಕಿದ್ದೇನೆ. 2009ರಲ್ಲಿ ನ್ಯಾಯಾಲಯ ನೀಡಿದ ಆದೇಶದಂತೆ ರಾಜ್ಯ ಪೊಲೀಸ್ ಇಲಾಖೆಯೂ ತಾಯಿಯ ಹುಡುಕಾಟಕ್ಕೆ ಪ್ರಯತ್ನ ಮಾಡುತ್ತಿದೆ. ಅಮ್ಮನ ಕೆಲ ಸ್ನೇಹಿತರನ್ನು ಭೇಟಿ ಮಾಡಿದಾಗ ರಾಯಚೂರಲ್ಲಿ ಇರುವುದಾಗಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos