ಟ್ಯಾಂಕರ್ ಲಾರಿ ಪಲ್ಟಿ

ಟ್ಯಾಂಕರ್ ಲಾರಿ ಪಲ್ಟಿ

ಕಾಸರಗೋಡು, ಅ.16 : ಕಾಸರಗೋಡು ನಗರದಿಂದ 1 ಕಿಮೀ ದೂರದಲ್ಲಿ ಅಡ್ಕತ್ ಬೈಲ್ ನಲ್ಲಿ ಟ್ಯಾಂಕರ್ ಲಾರಿ ಮಗುಚಿ ಅನಿಲ ಸೋರಿಕೆಯಾಗಿರುವ ಘಟನೆ ಮಂಗಳೂರು- ಕಾಸರಗೋಡು ಹೆದ್ದಾರಿಯಲ್ಲಿ ನಡೆದಿದೆ.
ಮಂಗಳೂರು-ಕಾಸರಗೋಡು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಪ್ರದೇಶದ ಕುಟುಂಬಗಳನ್ನು ತೆರವುಗೊಳಿಸುವುದರ ಜೊತೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸ್ಥಳೀಯ ಜನರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ. ಮಧ್ಯಾಹ್ನದ ತನಕ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಯಿಡಿಯಲಾಗಿದ್ದು . ಬೇರೆ ಮಾರ್ಗದ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದು, ತಾತ್ಕಲಿಕವಾಗಿ ಅನಿಲ ಸೋರಿಕೆ ತಡೆಹಿಡಿದ , ಇನ್ನೊಂದು ಟ್ಯಾಂಕರ್ ಗೆ ತುಂಬಿಸಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos