ತಂದೆಯೇ ಮಗುವಿನ ಜೀವಂತ ಸಮಾಧಿಗೆ ಯತ್ನಿ

ತಂದೆಯೇ ಮಗುವಿನ ಜೀವಂತ ಸಮಾಧಿಗೆ ಯತ್ನಿ

ಹೈದರಾಬಾದ್, ನ. 02: ಹೈದರಾಬಾದ್ ನಲ್ಲಿ ನವಜಾತ ಶಿಶುವನ್ನು ಜೀವಂತ ಸಮಾಧಿ ಮಾಡಲು ಮಗುವಿನ ತಂದೆ ಹಾಗೂ ಅಜ್ಜ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ.

ಸಿಕಂದರಾಬಾದ್ ನ ಜುಬಿಲಿ ಬಸ್ ನಿಲ್ದಾಣದ ಬಳಿ ಗುರುವಾರ ಮುಂಜಾನೆ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದದು ಆಟೋ ಚಾಲಕನೊಬ್ಬನ ಗಮನಕ್ಕೆ ಬಂದಿತ್ತು. ಒಬ್ಬ ವ್ಯಕ್ತಿ ಬಟ್ಟೆಯಲ್ಲಿ ಮಗುವನ್ನು ಸುತ್ತಿಕೊಂಡಿದ್ದರೆ ಮತ್ತೊಬ್ಬ ಗುಂಡಿ ತೋಡುತ್ತಿದ್ದ.

ಆಟೋ ಚಾಲಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅವರು ವಿಚಾರಣೆ ನಡೆಸಿದ ವೇಳೆ ಮಗು ಈಗಾಗಲೇ ಸತ್ತು ಹೋಗಿದೆ ಎಂದಿದ್ದಾರೆ. ಆದರೆ ಪರಿಶೀಲಿಸಿದಾಗ ಮಗು ಉಸಿರಾಡುತ್ತಿರುವುದು ಕಂಡು ಬಂದಿದ್ದು, ಆಗ ನಿಜ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಮಗುವನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos