ತಂಭಾಕು ಸೇವನೆ ದುಷ್ಪಾರಿಣಾಮಗಳ ಜಾಗೃತಿ

ತಂಭಾಕು ಸೇವನೆ ದುಷ್ಪಾರಿಣಾಮಗಳ ಜಾಗೃತಿ

ಸೂಲಿಬೆಲೆ, ಜು. 13 :  ಪ್ರತಿಯೊಬ್ಬರು ಸಹ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು, ಉತ್ತಮವಾದ ಆಹಾರ ಪದ್ದತಿ ಆಳವಡಿಸಿಕೊಳ್ಳಬೇಕು ಎಂದು ಮುಗಬಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯೆ ಡಾ: ವೀಣಾ ಹೇಳಿದರು.

ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲೂರಹಳ್ಳಿಯಲ್ಲಿ ನೆಡದ ತಂಬಾಕು ಸೇವನೆಯ ದುಷ್ಪಾರಿಣಾಮಗಳು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂಬಾಕು ಸೇವನೆಯಿಂದ ಕ್ಯಾನ್ಸರ್, ಶ್ವಾಸಕೋಶ ಹಾಗೂ ಹೃದಯ ಸಂಬಂದಪಟ್ಟ ಖಾಯಿಲೆಗಳು ಬರುವ ಅವಕಾಶ ಹೆಚ್ಚಾಗಿದ್ದು ಸಾರ್ವಜನಿಕರು ಈ ಬಗ್ಗೆ ಎಚ್ಚರವಹಿಸಬೇಕು, ಯುವ ಸಮುದಾಯ ಇದರಿಂದ ಅಂತರ ಕಾಯ್ದುಕೊಳ್ಳಬೇಕು ಹಾಗೂ ಸಮಾಜಕ್ಕೆ ಜಾಗೃತಿ ಮೂಡಿಬೇಕು ಎಂದು ತಿಳಿಸಿದರು.

ಗ್ರಾ.ಪಂ.ಸದಸ್ಯ ರಮೇಶ್ ಮಾತನಾಡಿ ಯುವ ಪೀಳಿಗೆ ಪಾಚ್ಚಾತ್ಯ ಸಂಸ್ಕೃತಿಯ ಜೀವನ ಶೈಲಿಯಿಂದ ಅನೇಕ ಹಾವ್ಯಾಸಗಳಿಗೆ ಬಲಿಯಾಗುತ್ತಿದ್ದು ಖಾಯಿಲೆಗಳಿಗೆ ತುತ್ತಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು.

ಇದೇ ಸಂಧರ್ಭದಲ್ಲಿ ತಂಬಾಕು ಸೇವನೆಯಿಂದ ದೂರವಿರುವಂತೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು, ಶಾಲಾ ಮಕ್ಕಳಿಂದ ರಸಪ್ರಶ್ನೆ ಕಾರ್ಯಕ್ರಮ ನೆಡೆಸಿ ಬಹುಮಾನ ವಿತರಣೆ ಮಾಡಲಾಯಿತು.

ಕ್ಷೇತ್ರ ಆರೋಗ್ಯಶಿಕ್ಷಣಾಧಿಕಾರಿ  ವಿಂಧ್ಯಾ, ನಿವೃತ್ತ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರವಿಚಂದ್ರ, ಗಂಗೋತ್ರಿ, ಬಾಲಾಜಿ, ಆಶಾಕಾರ್ಯಕರ್ತರು, ಅಂಗನವಾಡಿಕಾರ್ಯಕರ್ತರು ಹಾಜರಿದ್ದರು.

ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲೂರಹಳ್ಳಿ ಸರ್ಕಾರಿ ಶಾಲೆಯಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಅರಿವು ಕಾರ್ಯಕ್ರಮವನ್ನು ಮುಗಬಾಳ ಪ್ರಾ.ಆರೋಗ್ಯಕೇಂದ್ರದ ವೈಧ್ಯ ಡಾ; ವೀಣಾ,ಇತರರು ಉದ್ಘಾಟಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos