ಟಾಕಿಂಗ್ ಸ್ಟಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಟಾಕಿಂಗ್ ಸ್ಟಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು, ಜೂ. 28: ಕನ್ನಡ ಚಿತ್ರರಂಗದ ನಟ ನಿರೂಪಕ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 39ನೇ ವಸಂತಕ್ಕೆ ಕಾಲಿರಿಸಿರುವ ಸೃಜನ್ ‘ನೀಲ ಮೇಘ ಶ್ಯಾಮ’ ಎಂಬ ಚಿತ್ರದಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.

ಸೃಜನ್ ನಟನೆಗಿಂತ ನಿರೂಪಣೆಗೆ ಹೆಚ್ಚು ಪ್ರಸಿದ್ಧಿ. ರಿಯಾಲಿಟಿ ಷೋಗಳಾದ ‘ಮಜಾ ವಿತ್ ಸೃಜಾ’ , ‘ಮಜಾ ಟಾಕೀಸ್’ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ ಸೃಜನ್ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಸೃಜನ್ 2013ರಲ್ಲಿ ಲೋಕೇಶ್ ಪ್ರೊಡಕ್ಷನ್ಸ್ ಆರಂಭಿಸಿದರು. ಇವರ ನಿರ್ಮಾಣದಲ್ಲಿ ಚಾಲೆಂಜ್ , ಛೋಟಾ ಚಾಂಪಿಯನ್ಸ್ , ಕಾಸಿಗೆ ಟಾಸು ಹೀಗೆ ಹಲವಾರು ಕಾರ್ಯಕ್ರಮಗಳು ಹೊರಬಂದಿದ್ದು, ಪ್ರಸ್ತುತ ‘ಮಜಾ ಟಾಕೀಸ್’ ಎನ್ನುವ ಕಾರ್ಯಕ್ರಮದಲ್ಲಿ ಬ್ಯೂಸಿಯಾಗಿದ್ದಾರೆ. ‘ಮಜಾ ಟಾಕೀಸ್’ ಸೃಜನ್ ಅವರೇ ನಿರ್ದೇಶಿಸುತ್ತಿದ್ದು, ಹಿಂದಿಯ ಕಾಮಿಡಿ ‘ನೈಟ್ಸ್ ವಿತ್ ಕಪಿಲ್’ ಎನ್ನುವ ಕಾರ್ಯಕ್ರಮದ ಮೇಲೆ ಆಧಾರಿತವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos