ತಾಜ್ ಮಹಲ್ ಪ್ರವೇಶ ಇನ್ಮುಂದೆ ದುಬಾರಿ

ತಾಜ್ ಮಹಲ್ ಪ್ರವೇಶ ಇನ್ಮುಂದೆ ದುಬಾರಿ

ಆಗ್ರಾ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಇನ್ಮುಂದೆ ಕೊಂಚ ದುಬಾರಿಯಾಗಲಿದೆ. ತಾಜ್‌ಮಹಲ್‌ ನೋಡಲು ಬರುವ ಪ್ರವಾಸಿಗರು ಕೇವಲ ಮೂರು ಗಂಟೆಗಳ ಕಾಲ ಮಾತ್ರ ತಾಜ್‌ಮಹಲ್‌ನಲ್ಲಿರಲು ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚುವರಿ ಸಮಯ ಕಳೆದರೆ ಹೆಚ್ಚುವರಿ ದರ ನೀಡಬೇಕಾಗುತ್ತದೆ ಎಂದು ಸುತ್ತೋಲೆ ಹೊರಡಿಸಲಾಗಿದೆ.

ಪುರಾತತ್ತ್ವ ಶಾಸ್ತ್ರ ಇಲಾಖೆಯು ತಾಜ್ ಮಹಲ್ ಪ್ರವೇಶದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು, ತಾಜ್ ಮಹಲ್ ಪ್ರವೇಶಕ್ಕೆ ಸಮಯವನ್ನು ನಿಗದಿ ಮತ್ತು ಅನಧಿಕೃತ ಪ್ರವೇಶವನ್ನು ತಡೆಯಲು ಟರ್ನ್ ಸ್ಟೈಲ್ ಗೇಟ್‌ಗಳನ್ನು ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ಏಳು ಟರ್ನಸ್ಟೈಲ್‌ ಗೇಟ್‌ಗಳನ್ನು ಪೂರ್ವ ಮತ್ತು ಪಶ್ಚಿಮ ಪ್ರವೇಶ ದ್ವಾರಗಳಲ್ಲಿ ಅಳವಡಿಸಲಾಗುತ್ತದೆ. ಐದು ಗೇಟುಗಳು ನಿರ್ಗಮನ ದ್ವಾರದಲ್ಲಿವೆ. ವಿದೇಶಿ ಪ್ರವಾಸಿಗರಿಗೆಂದೇ ಪ್ರತ್ಯೇಕ ಗೇಟ್‌ ವ್ಯವಸ್ಥೆ ಮಾಡಲಾಗಿದೆ. ಮೂರು ಗಂಟೆಗಳ ಅವಧಿಯಿರುವ ಟೋಕನ್‌ಗಳನ್ನು ಹೊಂದಿದ್ದರೆ ಮಾತ್ರ ಒಳಗೆ ಪ್ರವೇಶವಿದೆ ಎಂದು ಪುರಾತತ್ತ್ವ ಇಲಾಖೆಯ ಸೂಪರಿಂಟೆಂಡೆಂಟ್‌ ಬಸಂತ್‌ ಕುಮಾರ್‌ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos