ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಿರಿ

ಬೆಂಗಳೂರು, ಏ. 23, ನ್ಯೂಸ್ ಎಕ್ಸ್ ಪ್ರೆಸ್: ವೈಜ್ಞಾನಿಕವಾಗಿ ಹೇಳುವುದಾದರೆ ಸದೃಡ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ನಮ್ಮ ದೇಹಕ್ಕೆ ತಾಮ್ರದ ಅವಶ್ಯಕತೆ ತುಂಬಾ ಇದೆ. ಅಷ್ಟು ಮಾತ್ರವಲ್ಲದೆ ತಾಮ್ರದಲ್ಲಿ ಇರುವ ಎಲೆಕ್ಟ್ರೋಲೆಟ್ ಗಳು ನೀರು ಹಾಳಾಗದಂತೆ ತಡೆಯುತ್ತದೆ. ಆದುದರಿಂದ ತಾಮ್ರದ ಪಾತ್ರೆಯಲ್ಲಿ ಇರಿಸಿದ ನೀರು ಯಾವಾಗಲೂ ತಾಜಾತನವನ್ನು ಒಳಗೊಂಡಿರುತ್ತದೆ. ಜೊತೆಗೆ ಕಫ, ಪಿತ್ತ, ವಾತ ಈ ಮೂರನ್ನು ಸಮತೋಲನದಲ್ಲಿ ಇರಿಸಲು ತಾಮ್ರ ಸಹಾಯ ಮಾಡುತ್ತದೆ.

ತಾಮ್ರದಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣವಿದೆ.

ಮುಖ್ಯವಾದ ಸಂಗತಿ ಎಂದರೆ ತಾಮ್ರ ದೇಹದ ರೋಗ ನಿವಾರಕ ಶಕ್ತಿ ಹೆಚ್ಚಿಸುವ ಜೊತೆಗೆ ರೋಗಗಳು ಬರದಂತೆ ತಡೆಯುತ್ತದೆ. ಪ್ರತಿದಿನ ತಾಮ್ರದ ಪಾತ್ರೆಯಲ್ಲಿ ಇರಿಸಿದ ನೀರನ್ನು ಕುಡಿಯುವುದರಿಂದ ಕಬ್ಬಿಣದ ಕೊರತೆ ಕಡಿಮೆಯಾಗುತ್ತದೆ. ರಕ್ತಹೀನತೆಯನ್ನು ಇದು ದೂರ ಮಾಡುತ್ತದೆ.

ಈ ನೀರು ಕುಡಿಯುವುದರಿಂದ ಕೊಬ್ಬು ಕರಗುತ್ತದೆ ಮತ್ತು ಜೀರ್ಣಕ್ರಿಯೆ ಸರಾಗವಾಗುತ್ತದೆ. ಅದರೊಂದಿಗೆ ಹೊಟ್ಟೆಯೊಳಗಿನ ಬ್ಯಾಕ್ಟೀರಿಯಾವನ್ನು ನಿವಾರಿಸುವ ಶಕ್ತಿ ಇದಕ್ಕಿದೆ.

ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಿ ರಕ್ತದೊತ್ತಡ ಹೆಚ್ಚಾಗದಂತೆ ತಡೆಯುವ ಶಕ್ತಿ ತಾಮ್ರದ ನೀರಿಗಿದೆ. ತಾಮ್ರ ನೀರಿನಲ್ಲಿ ಉರಿಯೂತ ಶಮನ ಮಾಡುವ ಗುಣ ಕೂಡಾ ಇರುವುದರಿಂದ ಸಂಧಿವಾತ ಬರದಂತೆ ತಡೆಯುವ ಸಾಮರ್ಥ್ಯ ಇದಕ್ಕಿದೆ.

ಬಹು ಮುಖ್ಯವಾದ ವಿಚಾರ ಎಂದರೆ ನೀರಿನ ಮೂಲಕ ದೇಹವನ್ನು ಸೇರುವ ಬ್ಯಾಕ್ಟೀರಿಯಾಗಳಿಗೆ ನಾವು ಬಹು ಬೇಗನೆ ತುತ್ತಾಗುತ್ತೇವೆ. ತಾಮ್ರದ ಪಾತ್ರೆಯ ನೀರಿಗೆ ಆ ಬ್ಯಾಕ್ಟೀರಿಯಾ ನಾಶ ಮಾಡುವ ಶಕ್ತಿ ಇದೆ.

ಫ್ರೆಶ್ ನ್ಯೂಸ್

Latest Posts

Featured Videos