ಟಿ20 ಕ್ರಿಕೆಟ್: ಭಾರತ ಗೆಲುವಿಗೆ 220ರನ್ ಗುರಿ ನೀಡಿದ ನ್ಯೂಜಿಲೆಂಡ್

ಟಿ20 ಕ್ರಿಕೆಟ್: ಭಾರತ ಗೆಲುವಿಗೆ 220ರನ್ ಗುರಿ ನೀಡಿದ ನ್ಯೂಜಿಲೆಂಡ್

ವೆಲಿಂಗ್ಟನ್‌:  ಮೊದಲ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ ತಂಡ ರೋಹಿತ್‌ ಶರ್ಮಾ ಪಡೆಗೆ 220ರನ್‌ಗಳ ಬೃಹತ್‌ ಗೆಲುವಿನ ಗುರಿ ನೀಡಿದೆ.

ಭಾರತ ತಂಡ ಇದುವರೆಗೆ ಇಲ್ಲಿ ಟಿ-20 ಪಂದ್ಯವನ್ನು ಗೆದ್ದಿಲ್ಲವಾದರೂ, ಇತ್ತೀಚೆಗೆ ಮುಕ್ತಾಯವಾದ ಏಕದಿನ ಸರಣಿಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಪಡೆಯನ್ನು ಮಣಿಸಿದ್ದ ವಿಶ್ವಾಸದಿಂದಲೇ ಕಣಕ್ಕಿಳಿದಿತ್ತು.

ಟಾಸ್‌ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ರೋಹಿತ್‌ ಶರ್ಮಾ ಲೆಕ್ಕಾಚಾರವನ್ನು ಎದುರಾಳಿ ತಂಡದ ಆರಂಭಿಕ ದಾಂಡಿಗ ಟಿಮ್ ಸೀಫರ್ಟ್‌ ತಲೆಕೆಳಗಾಗಿಸಿದರು. ಕಾಲಿನ್‌ ಮನ್ರೋ(34) ಜೊತೆ ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 82ರನ್‌ ಚಚ್ಚಿದರು.

ಕೇವಲ 43 ಎಸೆತಗಳಲ್ಲಿ ಆರು ಭರ್ಜರಿ ಸಿಕ್ಸರ್‌, 7 ಬೌಂಡರಿ ಗಳಿಸಿ ಸೀಫರ್ಟ್‌ 84ರನ್‌ ಸಿಡಿಸಿದರು. ಉಳಿದಂತೆ ನಾಯಕ ಕೇನ್‌ ವಿಲಿಯಮ್ಸನ್‌ 34 ರನ್‌ ದೋಚಿದರು. ಕೊನೆಯಲ್ಲಿ ಬಿರುಸಿನ ಆಟವಾಡಿದ ಸ್ಕಾಟ್ ಕುಗೆಲಿನ್‌ ಕೇವಲ ಏಳು ಎಸೆತಗಳಲ್ಲಿ 20ರನ್‌ ಬಾರಿಸಿದರು.

ರೋಹಿತ್‌ ಪಡೆಯ ಎಲ್ಲ ಬೌಲರ್‌ಗಳು 8.75ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟಿದ್ದು ಆತಿಥೇಯರ ಅಬ್ಬರದ ಬ್ಯಾಟಿಂಗ್‌ಗೆ ಸಾಕ್ಷಿಯಂತಿತ್ತು. ಹಾರ್ದಿಕ್‌ ಪಾಂಡ್ಯ 4ಓವರ್‌ಗಳಲ್ಲಿ 51ರನ್‌ ನೀಡಿ ಎರೆಡು ವಿಕೆಟ್‌ ಪಡೆದರೆ, ಭುವನೇಶ್ವರ್‌, ಖಲೀಲ್‌ ಅಹ್ಮದ್‌, ಕೃಣಾಲ್‌ ಪಾಂಡ್ಯ ಹಾಗೂ ಯಜುವೇಂದ್ರ ಚಾಹಲ್‌ ತಲಾ ಒಂದು ವಿಕೆಟ್‌ ಪಡೆದರು.

ಫ್ರೆಶ್ ನ್ಯೂಸ್

Latest Posts

Featured Videos