ಪ್ರಮಾಣವಚನ ಸ್ವೀಕಾರ: ಒಕ್ಕಲಿಗ ಸಮುದಾಯದವರ ಮೇಲುಗೈ

ಪ್ರಮಾಣವಚನ ಸ್ವೀಕಾರ: ಒಕ್ಕಲಿಗ ಸಮುದಾಯದವರ ಮೇಲುಗೈ

ಬೆಂಗಳೂರು, ಫೆ. 06: ಇಂದು ನೂತನ ಸಚಿವರಾಗಿ 10 ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಹುತೇಕ ಪ್ರಮಾಣವಚನ ಸ್ವೀಕರಿಸಿದ ಶಾಸಕರು ದೇವರ ಹೆಸರಿನಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ರು.  ಕೆಲವೇ ಕೆಲವರು ತಮ್ಮ ತಂದೆ-ತಾಯಿ, ಕ್ಷೇತ್ರದ ಜನತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ರು. ಹೀಗೆ ಪ್ರಮಾಣವಚನ ಸ್ವೀಕರಿಸಿದ 10 ಶಾಸಕರ ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ ಸಮುದಾಯದ ಶಾಸಕರು ಮೇಲುಗೈ ಸಾಧಿಸಿರುವುದು ತಿಳಿದು ಬರುತ್ತದೆ.

ಹೌದು, ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿದ 10 ಶಾಸಕರಲ್ಲಿ ಒಕ್ಕಲಿಗ ಸಮುದಾಯದ ಶಾಸಕರ ಸಂಖ್ಯೆಯೇ ಹೆಚ್ಚಿದೆ. ಈ ಮೂಲಕ ಒಕ್ಕಲಿಗ ಸಮುದಾಯದ ಶಾಸಕರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮೇಲುಗೈ ಸಾಧಿಸಿದಂತೆ ಆಗಿದೆ. ಅಲ್ಲದೇ ಪ್ರಾದೇಶಿಕ ಅಸಮಾಧನತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಯಾವುದೇ ನಿರ್ಧಾರವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೈಗೊಳ್ಳದಿರುವುದು ಕಂಡು ಬರುತ್ತಿದೆ.

ಹೀಗಿದೆ ಜಾತಿವಾರು ಪ್ರಾತಿನಿಧ್ಯ: ಒಕ್ಕಲಿಗ ಸಮುದಾಯ, ಎಸ್. ಟಿ.ಸೋಮಶೇಖರ್, ಕೆ.ಸಿ.ನಾರಾಯಣ ಗೌಡ, ಕೆ.ಗೋಪಾಯಯ್ಯ, ಡಾ.ಕೆ.ಸುಧಾಕರ, ಲಿಂಗಾಯತ ಸಮುದಾಯ, ಬಿ.ಸಿ.ಪಾಟೀಲ್, ವಾಲ್ಮೀಕಿ ಸಮುದಾಯ, ರಮೇಶ್ ಜಾರಕಿಹೊಳಿ, ಬ್ರಾಹ್ಮಣ ಜನಾಂಗ, ಶಿವರಾಂ ಹೆಬ್ಬಾರ್, ಕುರುಬ ಸಮುದಾಯ, ಬಿ.ಎ.ಬಸವರಾಜು, ರಜಪೂತ ಸಮುದಾಯ, ಆನಂದ್ ಸಿಂಗ್, ಮರಾಠ(ಜೈನ) ಸಮುದಾಯ, ಶ್ರೀಮಂತ ಪಾಟೀಲ್.

 

ಫ್ರೆಶ್ ನ್ಯೂಸ್

Latest Posts

Featured Videos