ಈಜುಕೊಳಕ್ಕಿಳಿದ ಕಾಂಗರೂ

ಸಿಡ್ನಿ, ಡಿ. 24 :  ಆಸ್ಟ್ರೇಲಿಯಾದಲ್ಲೀಗ ಬೇಸಿಗೆಗಾಲ ಶುರುವಾಗಿದ್ದು, ಎಲ್ಲೆಡೆ ಬಿಸಿಲಿನ ಬೇಗೆಯಿಂದ ಜನರು ಹಾಗೂ ಪ್ರಾಣಿಗಳಿಗೆ ಬಹಳ ಕಿರಿಕಿರಿಯಾಗುತ್ತಿದೆ. ದೇಶದ ಅನೇಕ ಕಡೆಗಳಲ್ಲಿ ಹವಾಮಾನವು 50 ಡಿಗ್ರಿ ದಾಟಿದೆ. ಸಾಮಾನ್ಯವಾಗಿ ಬಿಸಿಲಿನ ಝಳವನ್ನು ಮೆಟ್ಟಿ ನಿಲ್ಲಲು ಶಕ್ತವಾದ ಕಾಂಗರೂಗಳು ಸಹ ಈ ವರ್ಷದ ಬಿಸಿಲಿನ ಬಿಸಿಯನ್ನು ತಾಳಲಾರದಾಗಿವೆ.

ನ್ಯೂ ಸೌತ್ ವೇಲ್ಸ್ ಪ್ರಾಂತ್ಯದ ಕಾಂಗರೂವೊಂದು 48 ಡಿಗ್ರಿಯಷ್ಟು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಸ್ವಿಮ್ಮಿಂಗ್ ಪೂಲ್ಗೆ ಇಳಿದು ಮೈ ತಣಿಸಿಕೊಳ್ಳುತ್ತಿರುವ ವಿಡಿಯೋವೊಂದನ್ನು ಇಲ್ಲಿನ 98.1 ಪವರ್ ಎಫ್ಎಂ ಸ್ಟೇಷನ್ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos