‘ಸುವರ್ಣ ಸುಂದರಿ’ ಸದ್ಯದಲ್ಲೇ ಕನ್ನಡ ತೆರೆಗೆ…

‘ಸುವರ್ಣ ಸುಂದರಿ’ ಸದ್ಯದಲ್ಲೇ ಕನ್ನಡ ತೆರೆಗೆ…

ಬೆಂಗಳೂರು, ಮೇ.28, ನ್ಯೂಸ್ ಎಕ್ಸ್ ಪ್ರೆಸ್: ‘ಬಾಹುಬಲಿ’ ರೀತಿಯಲ್ಲೇ ಗುಣಲಕ್ಷಣ ಹೊಂದಿರೋ ಅಪ್ಪಟ ಕನ್ನಡ ಚಿತ್ರವೊಂದನ್ನು ನೋಡೋ ಭಾಗ್ಯ ಕನ್ನಡದ ಪ್ರೇಕ್ಷಕರಿಗೆ ಒದಗಿ ಬಂದಿದೆ. ಅದೇ ಕನ್ನಡದ ‘ಸುವರ್ಣ ಸುಂದರಿ’. ಇದು ಗತಕಾಲದ ಕಥೆ ಒಳಗೊಂಡಿದ್ದು 15ನೇ ಶತಮಾನದಿಂದ ಇಲ್ಲೀ ತನಕದ ದೃಶ್ಯಾವಳಿಗಳನ್ನು ಒಳಗೊಂಡಿದೆ. ಬಾಹುಬಲಿ ರೀತಿಯ ಗುಣಲಕ್ಷಣ ಹೊಂದಿರೋ ಅಪ್ಪಟ ಕನ್ನಡ ಚಿತ್ರವೊಂದನ್ನು ನೋಡೋ ಭಾಗ್ಯ ಕನ್ನಡದ ಪ್ರೇಕ್ಷಕರಿಗೆ ಒದಗಿ ಬಂದಿದೆ. ಅದೇ ಕನ್ನಡದ ‘ಸುವರ್ಣ ಸುಂದರಿ’ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸುತ್ತಾಡಿ ಇಂದಿನ ಕಾಲಮಾನದವರೆಗೆ ಪ್ರಯಾಣ ಬೆಳೆಸೋ ಕಥೆ ಹೊಂದಿರುವ ಈ ಚಿತ್ರ ಪುನರ್ಜನ್ಮದ ಕಥನವನ್ನೂ ಹೊಂದಿದೆ. ಸೂರ್ಯ ನಿರ್ದೇಶಿಸಿರುವ ಸುವರ್ಣ ಸುಂದರಿಯಲ್ಲಿ ನಾಲ್ಕು ತಲೆಮಾರಿನ ಕಥೆಯಿದ್ದು ಎಂ.ಎನ್.ಲಕ್ಷ್ಮಿ ಅವರು ಹತ್ತು ಕೋಟಿ ಬಂಡವಾಳ ಹೂಡಿ ಚಿತ್ರ ನಿರ್ಮಿಸಿದ್ದಾರೆ ಹಿರಿಯ ನಟಿ, ಸಂಸದೆ ಜಯಪ್ರದಾ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ಇನ್ನಷ್ಟು ಕುತೂಹಲ ಕೆರಳಿಸಿದೆ ಬಾಹುಬಲಿ ಚಿತ್ರಕ್ಕೆ ಸಿಜಿ ವರ್ಕ್ ಮಾಡಿದ್ದ ತಂತ್ರಜ್ಞರೇ ಈ ಚಿತ್ರಕ್ಕೆ 45 ನಿಮಿಷಗಳ ಸಿಜಿ ವರ್ಕ್ ಮಾಡಿದ್ದಾರಂತೆ. ಪೂರ್ಣ, ಸಾಕ್ಷಿ, ತಿಲಕ್, ಸಾಯಿ ಕುಮಾರ್, ಜೈ ಜಗದೀಶ್, ರಾಮ್, ಅವಿನಾಶ್, ಇಂದಿರಾ, ಸತ್ಯಪ್ರಕಾಶ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಎಸ್ ಟೀಮ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿನಿಮಾ ಸುವರ್ಣ ಸುಂದರಿಯನ್ನು ಎಂ.ಎಸ್.ಎನ್ ಸೂರ್ಯ ನಿರ್ದೇಶನ ಮಾಡಿದ್ದು, ಎಂ.ಎನ್ ಲಕ್ಷ್ಮೀ ನಿರ್ಮಾಣ ಮಾಡಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಲಿದೆ. ಇದು ಗತಕಾಲದ ಕಥೆ ಒಳಗೊಂಡಿದ್ದು 15ನೇ ಶತಮಾನದಿಂದ ಇಲ್ಲಿನ ತನಕದ ದೃಶ್ಯಾವಳಿಗಳನ್ನು ಒಳಗೊಂಡಿದೆ

ಫ್ರೆಶ್ ನ್ಯೂಸ್

Latest Posts

Featured Videos