ವಿದ್ಯಾರ್ಥಿನಿ ನೇಣಿಗೆ ಶರಣು

ವಿದ್ಯಾರ್ಥಿನಿ ನೇಣಿಗೆ ಶರಣು

ಕೊಟ್ಟೂರು: ವ್ಯಾಸಂಗದ ವಿಚಾರವಾಗಿ ಪೋಷಕರೊಡನೆ ಜಗಳವಾಡಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಉಜ್ಜಿನಿ ಗ್ರಾಮದ ನಿವಾಸಿಯಾದ ಪೂಜಾ ಯು.ಎನ್ ದಾವಣಗೆರೆ ಜಿಲ್ಲೆಯ ಜಗಳೂರಿನ ಸಿದ್ದಾರ್ಥ್ ಬಿಎಡ್ ಕಾಲೇಜಿನಲ್ಲಿ ಪ್ರಥಮ ವರ್ಷ ಓದುತ್ತಿದ್ದ, ಬಿಎಡ್ ವ್ಯಾಸಂಗ ಬಿಟ್ಟು ಪಿಎಚ್‍ಡಿ ಮಾಡುತ್ತೇನೆ ಎಂದು ಪೋಷಕರಲ್ಲಿ ಹೇಳಿಕೊಂಡಿದ್ದಾಳೆ. ಪೋಷಕರು ಮೊದಲು ಈ ವ್ಯಾಸಂಗ ಮುಗಿಸು ನಂತರ ಮುಂದಿನ ವ್ಯಾಸಂಗ ಮಾಡು ಎಂದು ತಿಳಿ ಹೇಳಿದ್ದರಿಂದ ಬೇಸರಗೊಂಡ ಪೂಜಾ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos