ಮಾಹಿತಿ ನೀಡದ ಆರ್ಬಿಐಗೆ ಸುಪ್ರೀಂ ನೋಟಿಸ್

ಮಾಹಿತಿ ನೀಡದ ಆರ್ಬಿಐಗೆ ಸುಪ್ರೀಂ ನೋಟಿಸ್

ನವದೆಹಲಿ: ಮಾಹಿತಿ ಹಕ್ಕು ಕಾಯ್ದೆಯಡಿ ಸಮರ್ಪಕ ಮಾಹಿತಿ ನೀಡದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸುಪ್ರೀಂ ಕೋರ್ಟ್ ಕಾಯ್ದೆ ಉಲ್ಲಂಘನೆ ನೋಟಿಸ್ ಜಾರಿ ಮಾಡಿದೆ.

ಸಹಾರಾ ಸಮೂಹ ಸಂಸ್ಥೆಯೊಂದಿಗಿನ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ಕೆಲವು ಬ್ಯಾಂಕ್ ಗಳ ತಪಾಸಣಾ ವರದಿಯ ಮಾಹಿತಿಯನ್ನು ಆರ್.ಬಿ.ಐ. ನೀಡಿಲ್ಲ ಎಂದು ಆರೋಪಿಸಿ ಮುಂಬೈ ನಿವಾಸಿ ಗಿರೀಶ್ ಮಿತ್ತಲ್ ಎಂಬವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಬಿ.ಐ., ಸುಪ್ರೀಂ ಕೋರ್ಟಿನ ಪಾರದರ್ಶಕ ನಿಯಮಗಳನ್ನು ಮುರಿದಿದೆ ಎಂದು ಅರ್ಜಿದಾರರು ಆಪಾದಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾ.ನಾಗೇಶ್ವರ್ ರಾವ್ ನೇತೃತ್ವದ ನ್ಯಾಯಪೀಠ ಆರ್.ಬಿ.ಐ.ಗೆ ಉತ್ತರಿಸುವಂತೆ ತಿಳಿಸಿದೆ.

ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಹೆಚ್.ಡಿ.ಎಫ್.ಸಿ. ಬ್ಯಾಂಕ್, ಎಸ್.ಬಿ.ಐ. ಹಾಗೂ ಸಹಾರಾ ಕಂಪನಿಗಳ ಮಧ್ಯೆ 2011ರಿಂದ ನಡೆದ ಅಕ್ರಮ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವಂತೆ 2015ರಲ್ಲಿ ಗಿರೀಶ್ ಆರ್.ಬಿ.ಐ. ಗೆ ಮಾಹಿತಿ ಹಕ್ಕು ಕಾಯ್ದೆಯನ್ವಯ ಅರ್ಜಿ ಸಲ್ಲಿಸಿದ್ದರು.

ಆದರೆ ಈ ಕುರಿತು ಆರ್.ಬಿ.ಐ. ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸುಪ್ರೀಂ ಕೋರ್ಟ್ ನ ಪಾರದರ್ಶಕ ನೀತಿಯ ಅನುಸಾರವಾಗಿ ಆರ್.ಬಿ.ಐ. ಯಾವುದೇ ಬ್ಯಾಂಕ್ ನ ನಂಬಿಗಸ್ಥನಾಗಿ ಕಾರ್ಯ ನಿರ್ವಹಿಸುವಂತಿಲ್ಲ. ಈ ಪ್ರಕರಣದಲ್ಲಿ ಆರ್.ಬಿ.ಐ. ಪಾರದರ್ಶಕವಾಗಿ ವರ್ತಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos