ಸುಮಲತಾರಿಗೆ 100 ರೂ. ಕೊಟ್ಟು ಹರಸಿದ ತರಕಾರಿ ವ್ಯಾಪಾರಿಗಳು!

ಸುಮಲತಾರಿಗೆ 100 ರೂ. ಕೊಟ್ಟು ಹರಸಿದ ತರಕಾರಿ ವ್ಯಾಪಾರಿಗಳು!

ಮಂಡ್ಯ, ಏ. 5, ನ್ಯೂಸ್ ಎಕ್ಸ್ ಪ್ರೆಸ್: ಸುಮಲತಾ ಅಂಬರೀಶ್ ತರಕಾರಿ ಮಾರುಕಟ್ಟೆಗೆ ಬೆಳಗ್ಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಮಾರುಕಟ್ಟೆ ನಂತರ 5 ರೂಪಾಯಿ ವೈದ್ಯ ಎಂದೇ ಹೆಸರುವಾಸಿಯಾಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ.ಶಂಕರೇಗೌಡರ ಮನೆಗೆ ತೆರಳಿ ಮಾತುಕತೆ ನಡೆಸಿದರು. ಸುಮಾರು 1 ಗಂಟೆಗಳ ಕಾಲ ಮಾತುಕತೆ ನಡೆಸಿದ ಸುಮಲತಾ, ಡಾ.ಶಂಕರೇಗೌಡರ ಬೆಂಬಲ ಸಿಗುವ ಭರವಸೆ ಇದೆ ಎಂದು ಹೇಳಿದರು. ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ತರಕಾರಿ ಮಾರುಕಟ್ಟೆಗೆ ಬೆಳಗ್ಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಪ್ರಚಾರದ ವೇಳೆ ಇಬ್ಬರು ಮಹಿಳೆಯರು ತಲಾ 100 ರೂ. ದೇಣಿಗೆ ನೀಡಿ, ಆಶೀರ್ವಾದ ಮಾಡಿದರು. ಸುಮಲತಾ ಗೆಲುವಿಗಾಗಿ ನಾವು ಈ ಸಣ್ಣ ದೇಣಿಗೆ ನೀಡಿದ್ದೇವೆ. ಅವರ ಹೋರಾಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಅಲ್ಲದೆ ರೈತರು ಸಹ ಬೆಂಬಲ ನೀಡುವಂತೆ ಮನವಿ ಮಾಡಿದರು. ನಟ ಅಂಬರೀಶ್​​ ಅವರಿಗೆ ಇಷ್ಟವಾಗಿದ್ದ ಬೆಲ್ಲದ ಮಿಠಾಯಿಯನ್ನು ಯುವಕನೊಬ್ಬ ತಂದುಕೊಟ್ಟು ಬಾಯಿ ಸಿಹಿ ಮಾಡಿದ.

ಮಾರುಕಟ್ಟೆ ನಂತರ 5 ರೂಪಾಯಿ ವೈದ್ಯ ಎಂದೇ ಹೆಸರುವಾಸಿಯಾಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ.ಶಂಕರೇಗೌಡರ ಮನೆಗೆ ತೆರಳಿ ಮಾತುಕತೆ ನಡೆಸಿದರು. ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು. ಕುಟುಂಬದ ಜೊತೆ ಸುಮಾರು 1 ಗಂಟೆಗಳ ಕಾಲ ಮಾತುಕತೆ ನಡೆಸಿದ ಸುಮಲತಾ, ಬೆಂಬಲ ಸಿಗುವ ಭರವಸೆ ಇದೆ ಎಂದು ಹೇಳಿದರು. ಡಾ.ಶಂಕರೇಗೌಡರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಡಾ. ಶಂಕರೇಗೌಡರ ಭೇಟಿ ನಂತರ, ಡಿಸಿ ಕಚೇರಿ ಎದುರಿನ ಉದ್ಯಾನವನಕ್ಕೆ ತೆರಳಿದರು. ಅಲ್ಲಿ ಡಾ.ಬಾಬು ಜಗಜೀವನ ರಾವ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಅದರ ಎದುರಿದ್ದ ಡಾ.ಅಂಬೇಡ್ಕರ್ ಪುತ್ಥಳಿಗೂ ಮಾಲಾರ್ಪಣೆ ಮಾಡಿದರು. ನಂತರ ಸುಮಲತಾ ಅಂಬರೀಶ್, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರಕ್ಕೆ ತೆರಳಿದರು.

ಫ್ರೆಶ್ ನ್ಯೂಸ್

Latest Posts

Featured Videos