ಮಂಡ್ಯ: ಕಳೆದ ಲೋಕಸಭಾ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ಕ್ಷೇತ್ರ ಈ ಬಾರಿಯೂ ಅದೇ ತರಹ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಈ ಭಾರಿ ಕುತೂಹಲಕ್ಕೆ ಕಾರಣವಾಗಿರುವ ಮಂಡ್ಯ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯದ ಕಾಳಿಕಾಂಬ ದೇಗುಲ ದರ್ಶನ ಪಡೆದರು.
ಈ ಕುರಿತು ಮಾತನಾಡಿರುವ ಅವರು, ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ. ಬೆಂಬಲಿಗರ ಜೊತೆ ಇರುತ್ತೇನೆ. ಮೈತ್ರಿ ಅಭ್ಯರ್ಥಿಗೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯೂ ಒಂದು ದೊಡ್ಡ ಸವಾಲು. 2019ರಲ್ಲಿ ಅದೊಂದು ಬೇರೆ ತರಹ ಇತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಂದು ಸವಾಲು ಎದುರಾಗಿದೆ. ನನಗೆ ಬೇರೆ ಕ್ಷೇತ್ರದ ಆಫರ್ ನೀಡಿದ್ರು. ಮೈಸೂರು ಕ್ಷೇತ್ರದಿಂದ ನಿಲ್ತೀರಾ ಅಂದ್ರು. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದೆ ಅಧಿಕಾರಕ್ಕೆ ಅಂಟಿಕೊಂಡು ಕೂರುವ ಆಸೆ ನನಗಿಲ್ಲ. ಬದಲಾದ ಪರಿಸ್ಥಿತಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಎಲ್ಲರಂತೆ ಆಗಿದ್ರೆ ಎಲ್ಲೋ ಒಂದು ಕಡೆ ಸ್ಪರ್ಧಿಸುತ್ತಿದ್ದೆ,ನಾನು ಯಾವತ್ತೂ ಮಂಡ್ಯವನ್ನು ಬಿಟ್ಟು ಹೋಗಲು ಇಷ್ಟವಿಲ್ಲ ಎಂದು ಸುಮಲತಾ ಅಂಬರೀಶ್ ತಿಳಿಸಿದರು. ಈ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರದ ಕಣದಿಂದ ಸುಮಲತಾ ಅಂಬರೀಶ್ ಹಿಂದೆ ಸರಿದಿದ್ದಾರೆ.