ಸುಮಲತಾ ಪರ ಪ್ರಚಾರಕ್ಕೆ ರಜಿನಿಕಾಂತ್ ಬರಲ್ಲ.!

ಸುಮಲತಾ ಪರ ಪ್ರಚಾರಕ್ಕೆ ರಜಿನಿಕಾಂತ್ ಬರಲ್ಲ.!

ಮಂಡ್ಯ, . 16, ನ್ಯೂಸ್ ಎಕ್ಸ್ ಪ್ರೆಸ್ : ಲೋಕಸಭಾ ಚುನಾವಣೆಯಲ್ಲಿ  ಬಾರೀ ಜಿದ್ದಾ ಜಿದ್ದಿನ ಕ್ಷೇತ್ರವೆಂದರೆ ಅದು ಮಂಡ್ಯ. ಹೌದು, ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದು, ಈಗಾಗಲೇ ಅಭ್ಯರ್ಥಿಗಳು ಕೂಡ ರಸ್ತೆಗಿಳಿದು ಇವತ್ತೊಂದು ದಿನ ಪ್ರಚಾರ ಮಾಡುತ್ತಿದ್ದಾರೆ.

ಇಂದು ಕೊನೆಯ ದಿನ ಆಗಿರೋದರಿಂದ ರಜಿನಿಕಾಂತ್ ಸುಮಲತ ಪರ ಪ್ರಚಾರ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ರಜಿನಿ ಪ್ರಚಾರಕ್ಕೆ ಬರಲ್ಲವಂತೆ.

ಇನ್ನೂ ಈಗಾಗಲೇ ಜೋಡೆತ್ತುಗಳ ಪ್ರಚಾರ ಹಾಗೂ ಮಂಡ್ಯ ಸೊಸೆಯ ಪ್ರಚಾರ ಜೋರಾಗಿ ನಡೆಯುತ್ತಿದೆ. ಇಂದು ರಜಿನಿಕಾಂತ್ ಸುಮಲತ ಪರ ಪ್ರಚಾರಕ್ಕೆ ಬರ್ತಾರೆ ಅಂತಾ ಹೇಳಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಸುಮಲತ.

ಹೌದು, ರಜಿನಿಕಾಂತ್ ಚುನಾವಣಾ ಪ್ರಚಾರಕ್ಕೆ ಆಗಮಿಸುವುದಿಲ್ಲ. ಅವರನ್ನು ನಾನು ಸಂಪರ್ಕ ಮಾಡಿಲ್ಲ. ಇಂದು ನಡೆಯುವ ಸಮಾವೇಶದಲ್ಲಿ ದರ್ಶನ್ ಯಶ್ ನಾನು ಇರುತ್ತೇವೆ. ಸಮಾವೇಶಕ್ಕೆ ರಜಿನಿಕಾಂತ್ ಬರುವುದಿಲ್ಲ ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos