ಸುಮಲತಾ ಬೆನ್ನಿಗೆ ನಿಂತ ಬಿಜೆಪಿ-ಕಾಂಗ್ರೆಸ್

ಸುಮಲತಾ ಬೆನ್ನಿಗೆ ನಿಂತ ಬಿಜೆಪಿ-ಕಾಂಗ್ರೆಸ್

ಮಂಡ್ಯ, ಮಾ. 30, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಗೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾ ಅಂಬರೀಶ್ ಇದೀಗ ಜಿಲ್ಲೆಯಾದ್ಯಂತ ಪ್ರಚಾರದಲ್ಲಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾದ ಸುಮಲತಾಗೆ ಮಂಡ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ 2 ಪಕ್ಷಗಳಿಂದಲೂ ಬೆಂಬಲ ದೊರೆಯುತ್ತಿದ್ದು, ಪ್ರಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಮಂಡ್ಯದ ಕಿಲಾರ ಗ್ರಾಮದಲ್ಲಿ ರೋಡ್ ಶೊ ನಡೆಸುತ್ತಿದ್ದು 2 ಪಕ್ಷದ ಬಾವುಟಗಳನ್ನೂ ಹಿಡಿದು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.

ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ – ಕಾಂಗ್ರೆಸ್ ಬಿರುಸಿನ ಪೈಪೋಟಿ ನಡೆಯುತ್ತಿದ್ದರೆ ಮಂಡ್ಯದಲ್ಲಿ ಮಾತ್ರ 2 ಪಕ್ಷಗಳ ಕಾರ್ಯಕರ್ತರು ಒಂದಾಗಿ ಸಾಥ್ ನೀಡುತ್ತಿದ್ದಾರೆ. ಇದರೊಂದಿಗೆ ರೈತ ಸಂಘವೂ ಕೂಡ ಸುಮಲತಾ ಬೆನ್ನಿಗೆ ನಿಂತು ಬೆಂಬಲ ನೀಡುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos