ಶುಲ್ಕ ವಸೂಲಿಗೆ ಸರ್ಕಾರಗಳ ವೈಪಲ್ಯ

ಶುಲ್ಕ ವಸೂಲಿಗೆ ಸರ್ಕಾರಗಳ ವೈಪಲ್ಯ

ಬೆಂಗಳೂರು, ಜು.6 : ಖಾಸಗಿ ಶಾಲೆ, ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ವಸೂಲಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕ ವಸೂಲಿಗೆ ಸರ್ಕಾರದ ವೈಪಲ್ಯ ಕಾರಣ ಹೌದು ಎನ್ನತ್ತಿದೆ ಸಾರ್ವಜನಿಕ ವಲಯ. ಬೆಂಗಳೂರು ನಗರ ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾರು ಪತ್ಯಕ್ಕಿಲ್ಲ ಕಡಿವಾಣ. ಸರ್ಕಾರ ನಿಗಧಿಪಡಿಸಿದ ಪ್ರವೇಶ ಶುಲ್ಕಕ್ಕಿಂತ ಅಧಿಕ ಹಣ ವಸೂಲಿ ಬಾಜಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತೊಡಗಿವೆ. ಆರ್ ಟಿ ಇ ಅಡಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ವೆಟಿಂಗ್ ಲಿಷ್ಟ್ ನಲ್ಲಿ ಟ್ಟು ಸಂಸ್ಥೆಗಳ ಅಣತಿಯಂತೆ ದುಬಾರಿ ಶುಲ್ಕ ಪಾವತಿ ಮಾಡುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸ. ಶಾಲಾ ಕಾಲೇಜು ಅಭಿವೃದ್ಧಿ ಶುಲ್ಕ, ಪ್ರವೇಶ ಶುಲ್ಕ, ಆರೋಗ್ಯ,ವಸತಿ, ಪಠ್ಯಪುಸ್ತಕ, ಸಮವಸ್ತ್ರ ಹೀಗೆ ಶುಲ್ಕಪಟ್ಟಿ ಯಾರು ಭರಿಸುತ್ತಾರೋ ಅಂತಹವರ ಉಳ್ಳವರ ಪಾಲಾಗುತ್ತಿದೆ ಶಿಕ್ಷಣ. ಇಂದಿನ ಶಿಕ್ಷಣ ಸಂಸ್ಥೆಗಳು ಹಣಗಳಿಸೋ ಹುಲ್ಲುಗಾವಲುಗಳಾದ್ದು, ವ್ಯಾಪಾರೀಕರಣವಾಗುತ್ತಿರುವ ಶಿಕ್ಷಣ ಜೊತೆಗೆ ಬಡ ಮತ್ತು ಮದ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗ್ತಿದೆ ಶಿಕ್ಷಣ.
ಶಿಕ್ಷಣದಲ್ಲಿ ರಾಜಕಾರಣಿಗಳ ಪಾಲು: ಇತ್ತೀಚಿನ ದಿನ ಮಾನಗಳಲ್ಲಿ ಸರ್ಕಾರಿ ನೌಕರರು ಉದ್ಯಮಿಗಳು, ರಾಜಕಾರಣಿಗಳು, ವ್ಯಾಪಾರಿಗಳ ಪಾಲಾಗುತ್ತಿರುವ ಶಿಕ್ಷಣ ಸಂಸ್ಥೆಗಳ ಲಾಭಗಡುಕತನ ಇಡೀ ವ್ಯವಸ್ಥೆಯ ಕಳಂಕ ಅಂದರೆ ತಪ್ಪಲ್ಲ.
ಇದರ ಪರಿಣಾಮವಾಗಿ ಕೆಳಸ್ತರದವರ ಮೇಲಾಗುತ್ತಿರುವ ಪರಿಣಾಮದ ಅರಿವು ಆಡಳಿತ ಸರ್ಕಾರಗಳ ನಿಗಾವಹಿಸುವಿಕೆಯ ವೈಪಲ್ಯ ಹಾಗು ಕೆಲ ರಾಜಕಾರಗಳ ಪಾಲುದಾರಿಕೆ ಸಂಸ್ಥೆಗಳ ದಬ್ಬಾಳಿಕೆ ಕೂಡಾ ಇದಕ್ಕೆ ಕಾರಣ. ಪ್ರೀ ಎಜುಕೇಶನ್ ಇಂದ ಹಿಡಿದು ಉನ್ನತ ಶಿಕ್ಷಣದವರೆಗೆ ಎಲ್ಲಾ ಹಂತದಲ್ಲಿ ಯೂ ಡೊನೇಷನ್ ಇಲ್ಲದೆ ಪ್ರವೇಶ ಇಲ್ಲ .
ಶಿಕ್ಷಣ ಸಾರ್ವತ್ರಿಕರಣ ಆಗದ ಹೊರತು ಪ್ರತಿಯೊಬ್ಬರು ಸಮಾನ ಶಿಕ್ಷಣ ಸಾದ್ಯವಿಲ್ಲ ಶಿಕ್ಷಣ ತಜ್ಞ ರು ಮತ್ತು ಹೋರಾಟಗಾರರು ಆಡಿತ ಸರ್ಕಾರಗಳ ಮೇಲೆ ಒತ್ತಡ ಹೇರಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡದಿಂದಾಗಿ ಇನ್ನು ತಟಸ್ಥ ಧೋರಣೆ ಯಿಂದಾಗಿ ಬಡವರ ಮಕ್ಕಳ ಶಿಕ್ಷಣದ ಹಕ್ಕು ಹರಣವಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos