ಬದುಕುಳಿಯಲಿಲ್ಲ ಬಾಲಕ

ಬದುಕುಳಿಯಲಿಲ್ಲ  ಬಾಲಕ

ಚೆನ್ನೈ, ಅ. 29:  ಬೋರ್ವೆಲ್ ಗೆ ಬಿದ್ದಿದ್ದ ಪುಟ್ಟ ಬಾಲಕ ಸುಜಿತ್ ಇನ್ನಿಲ್ಲ. ಕಾರ್ಯಾಚರಣೆ ವಿಫಲವಾಗದೇ ಬಾಲಕ ಸಾವನ್ನಪ್ಪಿದ್ದಾನೆ.

ತಮಿಳುನಾಡಿನ ತಿರುಚ್ಚಿ ನಡಕಟ್ಟುಪಟ್ಟಿ ಸಮೀಪ ಬೋರ್ವೆಲ್ ಗೆ ಪುಟ್ಟ ಬಾಲಕ ಶುಕ್ರವಾರ ಸಂಜೆ ಆಯಾತಪ್ಪಿ ಬಿದ್ದಿದ್ದನು. 600 ಅಡಿ ಆಳದ ಬೋರ್ವೆಲ್ ನಲ್ಲಿ ಬಿದ್ದಿದ್ದ ಮಗು 100 ಅಡಿ ಆಳದಲ್ಲಿ ಸಿಲುಕಿದ್ದನು. ಕಳೆದ ನಾಲ್ಕು ದಿನಗಳಿಂದ ಸುಜಿತ್ ನನ್ನು ರಕ್ಷಿಸಲು ಅಲ್ಲಿನ ಜಿಲ್ಲಾಡಳಿತ  ಎಷ್ಟೇ ಹರಸಾಹಸ ಪಟ್ಟರೂ ಬಾಲಕನ ಜೀವ ಉಳಿಸಲು ಆಗಲಿಲ್ಲ.

ನಿನ್ನೆ ರಾತ್ರಿ ಕಾರ್ಯಾಚರಣೆ ಮಾಡುವಾಗ ವಿಪರೀತ ದುರ್ವಾಸನೆ ಬರುತ್ತಿರುವ ಕಾರಣ ಅಧಿಕಾರಿಗಳು ಕಾರ್ಯಾಚರಣೆಯನ್ನು ನಿಲ್ಲಿಸಿದ್ದಾರೆ. ನಮ್ಮಿಂದ ಮಗುವನ್ನು ಜೀವಂತವಾಗಿ ಹೊರತೆಗೆಯಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರಿಟ್ಟರು.

ಫ್ರೆಶ್ ನ್ಯೂಸ್

Latest Posts

Featured Videos