ಕಬ್ಬು ಕಟಾವು ಆಗದೇ ಗರಿ ಹಿರಿದು ನಿಂತಿರುವ ಮಾರುದ್ದ ಕಬ್ಬಿನ ಬೆಳೆ

ಕಬ್ಬು ಕಟಾವು ಆಗದೇ ಗರಿ ಹಿರಿದು ನಿಂತಿರುವ ಮಾರುದ್ದ ಕಬ್ಬಿನ ಬೆಳೆ

ಚಿಕ್ಕೋಡಿ, ಜ. 14: ಗಾಯದ ಮೆಲೆ ಬರೆ ಎಳೆದಂತಾಗಿದೆ ನಮ್ಮ ರೈತರ ಬಾಳು ಏಪ್ರಿಲ್ ಮೇ ತಿಂಗಳಲ್ಲಿ ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ತಿತಿ ಉಂಟಾಗಿದ್ದು, ಕಳೆದ ಆಗಷ್ಟ ತಿಂಗಳಲ್ಲಿ ನೆರೆಯಲ್ಲಿ ನೊಂದು ಬೆಂದ ರೈತರಿಗೆ ಈಗ ಮತ್ತೊಂದು ಸಂಕಷ್ಟ ಬಂದೋದಗಿದೆ. ಮಾರುದ್ದ ಬೆಳೆದು ನಿಂತಿದ್ದ ಕಬ್ಬು ಈಗ ಕಟಾವಿಗೆ ಬಂದಿದೆ. ಆದರೆ ಕಬ್ಬು ಕಟಾವಿಗೆ ಕೂಲಿಯಾಳುಗಳ ಸಮಸ್ಯೆ ಎದುರಾಗಿದೆ. ಹೀಗಾಗಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡಿ ಕಳಿಸಲು ರೈತರು ಪರದಾಡುತ್ತಿದ್ದಾರೆ.

ಪ್ರಸಕ್ತ ಕಬ್ಬು ಕಟಾವು ಹಂಗಾಮು ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದರೂ ಸಹ ಶೇ ಅರ್ಧಕ್ಕಿಂತ ಹೆಚ್ಚಿನ ಕಬ್ಬು ಜಮೀನುಗಳಲ್ಲಿ ಮಾರುದ್ದ ಬೆಳೆದು ನಿಂತಿದೆ. ಪ್ರತಿ ವರ್ಷ ನೆರೆಯ ಮಹಾರಾಷ್ಟ್ರದಿಂದ ಸಾಕಷ್ಟು ಕಬ್ಬು ಕಟಾವು ಮಾಡುವ ಕೂಲಿಯಾಳುಗಳು ರಾಜ್ಯಕ್ಕೆ ಬರುತ್ತಿದ್ದರು. ಆದರೆ ಈ ವರ್ಷ ಸಮರ್ಪಕ ಕೂಲಿಯಾಳುಗಳು ಬರದೇ ಇರುವ ಕಾರಣದಿಂದ ರೈತರ ಜಮೀನುಗಳಲ್ಲಿ ಕಬ್ಬು ಗರಿ ಹಿರಿದು ಜಮೀನುಗಳಲ್ಲಿಯೇ ಬೆಳೆದು ನಿಂತುಕೊಂಡಿದೆ.

ರಾಜ್ಯದ ಗಡಿ ಭಾಗದ ಕೃಷ್ಣಾ, ದೂಧಗಂಗಾ, ವೇಧಗಂಗಾ, ಪಂಚಗಂಗಾ, ಘಟಪ್ರಭಾ, ಹಿರಣ್ಯಕೇಶಿ ನದಿಗಳ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ಭಾಗದಲ್ಲಿ 13 ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ವರ್ಷದಲ್ಲಿ ಕಾರ್ಯಾರಂಭ ಮಾಡಿವೆ. ಅತಿಯಾದ ಮಳೆ ಮತ್ತು ನೆರೆಯಲ್ಲಿ ಮುಳುಗಡೆಗೊಂಡ ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಬರುವುದಿಲ್ಲ ಎಂಬ ಕಾರಣವೊಡ್ಡಿ ಸಕ್ಕರೆ ಕಾರ್ಖಾನೆಗಳು ನಿರೀಕ್ಷೆ ಮಾಡಿದಷ್ಟು ಕಬ್ಬು ಕಟಾವು ಮಾಡುವ ಕೂಲಿಯಾಳುಗಳನ್ನು ಕರೆದು ತಂದಿಲ್ಲ. ಹೀಗಾಗಿ ಕಾರ್ಖಾನೆಗೆ ಕಬ್ಬು ಕಳಿಸಲು ರೈತರು ಪರದಾಡುತ್ತಿದ್ದಾರೆ.

ಕಳೆದ ಆಗಷ್ಟ ತಿಂಗಳಲ್ಲಿ ಕೃಷ್ಣಾ ಮತ್ತು ಉಪನದಿಗಳಿಂದ ಉಂಟಾದ ಭೀಕರ ಮಹಾಪೂರದಿಂದ ರಾಜ್ಯದ ಗಡಿ ಜಿಲ್ಲೆಯ ರೈತರು ನಲುಗಿ ಹೋಗಿದ್ದರು. ಬರದಿಂದ ಕಂಗೆಟ್ಟಿದ್ದ ರೈತರಿಗೆ ಮಳೆ ವರದಾನವಾಗಿದೆಂದು ರೈತರು ಸಂತೋಷ ಪಡುವ ಹೊತ್ತಿನಲ್ಲಿ ಅತೀಯಾದ ಮಳೆಯಿಂದ ನೆರೆ ಉಂಟಾಗಿ ಸಾಕಷ್ಟು ಹಾನಿ ಮಾಡಿ ಹೋಗಿತ್ತು. ಇದರಿಂದ ಬರ-ನೆರೆಯಿಂದ ಮಗಲ್ಲು ಮುರಿದುಕೊಂಡ ರೈತನಿಗೆ ಈಗ ಕಬ್ಬು ಕಾರ್ಖಾನೆಗೆ ಹೋಗದೇ ಇರುವುದು ದೊಡ್ಡ ಸಂಕಷ್ಟ ತಂದೊಡ್ಡಿದೆ.

ಇಳುವರಿ ಹೆಚ್ಚಿರುವ ಕಬ್ಬಿಗೆ ಮೊದಲ ಆಧ್ಯತೆ: ರಾಜ್ಯದ ಗಡಿ ಭಾಗದ ಚಿಕ್ಕೋಡಿ ಭಾಗದಲ್ಲಿ 13 ಸಕ್ಕರೆ ಕಾರ್ಖಾನೆಗಳು ಮತ್ತು ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಇಳುವರಿ ಹೆಚ್ಚಿರುವ ಕಬ್ಬಿಗೆ ಮೊದಲ ಆಧ್ಯತೆ ನೀಡುತ್ತಿವೆ. ಹೀಗಾಗಿ ನೆರೆಯಲ್ಲಿ ಮುಳುಗಿರುವ ಕಬ್ಬು ಕಟಾವಾಗದೇ ಹಾಗೇ ರೈತರ ಜಮೀನುಗಳಲ್ಲಿ ನಿಂತುಕೊಂಡಿದೆ. ಕಬ್ಬು ಕಟಾವು ಮಾಡಬೇಕೆಂದು ರೈತರು ಕಾರ್ಖಾನೆಗಳ ಅಧಿಕಾರಗಳಿಗೆ ದುಂಬಾಲು ಬಿದ್ದರು ಸಹ ಪ್ರಯೋಜನೆವಾಗುತ್ತಿಲ್ಲ. ಯಾಕೆಂದರೇ ಕಬ್ಬು ಕಟಾವು ಮಾಡುವ ಗ್ಯಾಂಗ್ ಕೊರತೆಯಿಂದ ಸಮಸ್ಯೆ ಉದ್ಬವಿಸಿದೆ.

ವ್ಯಾಪ್ತಿ ವಿಸ್ತರಿಸಿಕೊಂಡ ಸಕ್ಕರೆ ಕಾರ್ಖಾನೆಗಳು: ಪ್ರತಿ ವರ್ಷ ಆಯಾ ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಮಾಡಿಕೊಂಡು ಕಾರ್ಖಾನೆಗೆ ಸರಬರಾಜು ಮಾಡಲು ಅಂದಾಜು 40 ಕಿ.ಮೀ ವ್ಯಾಪ್ತಿ ನಿಗದಿ ಮಾಡಿದ್ದವು. ಆದರೆ ಈ ವರ್ಷ ನೆರೆಯಿಂದ ಕಬ್ಬು ಹಾನಿಯಾಗಿದೆ ಎಂಬುದನ್ನು ಅರಿತುಕೊಂಡ ಕಾರ್ಖಾನೆಗಳು ತನ್ನ ವ್ಯಾಪ್ತಿ ವಿಸ್ತರಿಸಿಕೊಂಡು 60-70 ಕಿ.ಮೀ ದೂರದವರಿಗೆ ಹೆಚ್ಚು ಇಳುವರಿ ಬರುವ ಕಬ್ಬು ತೆಗೆದುಕೊಂಡು ಬರುತ್ತಿದ್ದಾರೆ.

ಕಳೆದ ವರ್ಷಕ್ಕಿಂತ ಈ ವರ್ಷ ಕಬ್ಬಿನ ಗ್ಯಾಂಗ್ ಕಡಿಮೆ ತರಿಸುವ ತಿರ್ಮಾಣ ತೆಗೆದುಕೊಳ್ಳಲಾಗಿತ್ತು. ಆದರೆ ನಾವು ನಿರೀಕ್ಷೆ ಮಾಡಿದಷ್ಟು ಕಬ್ಬು ಕಟಾವು ಮಾಡುವ ಗ್ಯಾಂಗ್ ಬರಲಿಲ್ಲ. ಹೀಗಾಗಿ ರೈತರ ಕಬ್ಬು ನಿಧಾನವಾಗಿ ಕಟಾವು ಆಗುತ್ತಿದೆ. ಪ್ರಸಕ್ತ ವರ್ಷದ ಹಂಗಾಮು ಫೆ-10ರವರಿಗೆ ನಡೆಸಲು ಯೋಚನೆ ಇದೆ. ರೈತರು ಚಿಂತೆ ಮಾಡಬೇಕಿಲ್ಲ ಎಂದು ಅಮಿತ ಪ್ರಭಾಕರ ಕೋರ ಚೇರಮನರು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಚಿಕ್ಕೋಡಿ ಯವರು ತಿಳಿಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos