ಮತ್ತೆ ತಮಿಳು ಚಿತ್ರದಲ್ಲಿ ಸುದೀಪ್!?

ಮತ್ತೆ ತಮಿಳು ಚಿತ್ರದಲ್ಲಿ ಸುದೀಪ್!?

ಬೆಂಗಳೂರು, ಡಿ. 28: ಕನ್ನಡ ಚಿತ್ರರಂದ ಕಿಚ್ಚ ಸುದೀಪ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಚಿತ್ರದಲ್ಲಿ ಬಲ್ಲಿ ಸಿಂಗ್ ಎಂಬ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು ಸಾಕಷ್ಟು ಮೆಚ್ಚುಗೆ ಪಡೀತಿದ್ದಾರೆ. ಈ ಹಿಂದೆ ತಮಿಳಿನ ಪುಲಿ ಸಿನಿಮಾದಲ್ಲಿ ವಿಲನ್ ಆಗಿ ಮಿಂಚಿದ್ರು. ಈಗ ಮಾನಾಡು ಎಂಬ ಮತ್ತೊಂದು ತಮಿಳು ಸಿನಿಮಾದಲ್ಲಿ ವಿಲನ್ ರೋಲ್ಗಾಗಿ ಸುದೀಪ್ರನ್ನ ಅಪ್ರೋಚ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ ಅಂತ ಸ್ವತಃ ಕಿಚ್ಚ ಸ್ಪಷ್ಟಪಡಿಸಿದ್ದಾರೆ.

“ವೆಂಕಟ್ ಪ್ರಭು ನಿರ್ದೇಶನದ ಸಿಂಬು ಅಭಿನಯದ ‘ಮಾನಾಡು’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಲು ಕಿಚ್ಚ ಸುದೀಪ್ಗೆ ಗಾಳ ಹಾಕಲಾಗಿದೆ. ಈಗಾಗಲೇ ನಿರ್ದೇಶಕರು, ಒಂದು ಸುತ್ತಿನ ಮಾತುಕತೆಯೂ ನಡೆಸಿದ್ದು, ಸುದೀಪ್ ಈ ಪಾತ್ರ ನಿರ್ವಹಿಸಲು ಒಪ್ಪಿದ್ದಾರೆ” ಅಂತ ಫ್ಯಾನ್ ಪೇಜ್ವೊಂದು ಟ್ವೀಟ್ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರೋ ಸುದೀಪ್, ಇದು ತಪ್ಪು ಸುದ್ದಿ ಎಂದು ಹೇಳಿದ್ದು, ವದಂತಿಗೆ ತೆರೆ ಎಳೆದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos