ಯಶಸ್ವಿಯಾಗಿ ನಡೆಯುತ್ತಿರುವ ವಿದ್ಯಾಗಮ

ಯಶಸ್ವಿಯಾಗಿ ನಡೆಯುತ್ತಿರುವ ವಿದ್ಯಾಗಮ

ಹುಳಿಯಾರು:ಪ್ರಸಕ್ತ ಕೊರೋನಾ ವೈರಸ್ ಹರಡುತ್ತಿರುವ ಸಮಯದಲ್ಲಿ ಸರ್ಕಾರ ಮಕ್ಕಳ ಶಿಕ್ಷಣ ನಿಲುಗಡೆಯಾಗದಂತೆ ಮುಂದುವರಿಸಲು ರೂಪಿಸಿದ ‘ವಿದ್ಯಾಗಮ’ ಯೋಜನೆ ಹುಳಿಯಾರು ಹೋಬಳಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.ಮಕ್ಕಳು, ಪೋಷಕರು ವಿದ್ಯಾಗಮ ಯೋಜನೆಗೆ ಸಹಕರಿಸುತ್ತಿದ್ದು ಹಾಜರಾತಿ ಕೂಡ ಉತ್ತಮವಾಗಿದೆ. ನಾಲ್ಕು ಗೋಡೆಗಳ ನಡುವಿನ ಶಿಕ್ಷಣಕ್ಕಿಂತಲೂ ಬಯಲು ಶಾಲೆಗೆ ಮಕ್ಕಳು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಆದರೆ ಒಮ್ಮೆ ಐವರು ಮಕ್ಕಳಿಗೆ ಮಾತ್ರ ಬೋದನೆಗೆ ಸರ್ಕಾರ ಮಿತಿ ನಿಗಧಿ ಮಾಡಿರುವುದು ಕೆಲ ಮಕ್ಕಳಿಗೆ ತೊಂದರೆಯಾಗಿದೆ.

ಶಾಲೆಗಳಿಲ್ಲದ ಹಳ್ಳಿಗಳಲ್ಲೂ ಕೂಡ ಶಾಲಾ ಮಕ್ಕಳಿಗೆ ತರಗತಿ ನಡೆಸುತ್ತಿರುವುದು ಪೋಷಕರಿಗೆ ಸಂತಸದ ವಿಷಯವಾಗಿರುವ ಜೊತೆಗೆ ಮಕ್ಕಳು ನಡೆದು ಶಾಲೆಗೆ ಹೋಗುವುದು ತಪ್ಪಿದಂತ್ತಾಗಿದೆ. ಅಲ್ಲದೆ ಶಿಕ್ಷಕರು ಹೇಗೆ ಪಾಠ ಮಾಡುತ್ತಿದ್ದಾರೆಂದು ನೋಡುವ ಅವಕಾಶ ಸಹ ಸಿಕ್ಕಿದಂತ್ತಾಗಿದೆ ಎನ್ನುವ ಮಾತುಗಳು ಹಳ್ಳಿಗರಿಂದ ಕೇಳಿ ಬರುತ್ತಿದೆ. ಮಕ್ಕಳಿಗೆ ಮೊಬೈಲ್, ಆನ್‌ಲೈನ್ ಶಾಲೆ, ಟಿವಿ ಪಾಠಕ್ಕಿಂತ ಬಯಲು ಶಾಲೆ ಶಿಕ್ಷಣ ‘ವಿದ್ಯಾಗಮ’ ಉತ್ತಮ ಯೋಜನೆಯಾಗಿದ್ದು. ಮೊಬೈಲ್ ಇಲ್ಲದ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ತಪ್ಪಿದೆ. ಸ್ಯಾನಿಟೈಸರ್ ಬಳಸುವುದು ಹಾಗೂ ಮಾಸ್ಕ್ ಹಾಕಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos