ಚಿಂಚೋಳಿ ಉಪ ‘ಸಮರ’ ನಾಳೆ ‘ಮತದಾನ’

ಚಿಂಚೋಳಿ ಉಪ ‘ಸಮರ’ ನಾಳೆ ‘ಮತದಾನ’

ಕಲಬುರ್ಗಿ, ಮೇ. 18, ನ್ಯೂಸ್ ಎಕ್ಸ್ ಪ್ರೆಸ್ : ನಾಳೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಗೆ ಮತದಾನ ನಡೆಯಲಿದ್ದು, ಚುನಾವಣಾ ಆಯೋಗದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಿಂಚೋಳಿಯ ಚಂದಾಪುರದಲ್ಲಿರುವ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಮಸ್ಟರಿಂಗ್-ಡಿಮಸ್ಟರಿಂಗ್ ಕಾರ್ಯ ನಡೆಯುತ್ತಿದ್ದು, ಮತದಾನಕ್ಕಾಗಿ ಎಆರ್​ಒ, ಪಿಆರ್​ಒ ಸೇರಿ 1308 ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಚಿಂಚೋಳಿಯ 118, ಚಿತ್ತಾಪುರ ತಾಲೂಕಿನ 26 ಹಳ್ಳಿಗಳಲ್ಲಿ ನಾಳೆ ಮತದಾನ ಪ್ರಕ್ರಿಯೆ ನಡೆಯಲಿದೆ. 98881 ಪುರುಷ ಮತದಾರರು, 94578 ಮಹಿಳಾ ಮತದಾರರು, ಇತರೆ 16 ಹಾಗೂ 79 ಸೇವಾ ಮತದಾರರು ಸೇರಿ ಒಟ್ಟು 1,93,475 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಇನ್ನು ನಾಳಿನ ಮತದಾನಕ್ಕೆ 241 ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. 241 ಮತಗಟ್ಟೆಗಳಲ್ಲಿ 60 ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಭದ್ರತೆಗಾಗಿ ಪೊಲೀಸ್​ ಬಿಗಿ ಬಂದೋಬಸ್ತ್​ ನಿಯೋಜಿಸಲಾಗಿದೆ. ಓರ್ವ ಎಸ್​ಪಿ, ಓರ್ವ ಎಎಸ್​ಪಿ ನೇತೃತ್ವದಲ್ಲಿ 3 ಡಿಎಸ್‌ಪಿ, 18 ಸಿಪಿಐ, 44 ಎಎಸ್ಐ, 470 ಪೇದೆಗಳು 300 ಹೋಮ್ ಗಾರ್ಡ್ ಸಿಬ್ಬಂದಿ, 2 ಕೆಎಸ್ಆರ್​ಪಿ ತುಕಡಿ, 12 ಡಿಎಆರ್ ತುಕಡಿಗಳು, 24 ಮೊಬೈಲ್ ಸೆಕ್ಟರ್​ಗಳನ್ನ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos