ವಿದ್ಯಾರ್ಥಿನಿ ಸಾವು

ವಿದ್ಯಾರ್ಥಿನಿ ಸಾವು

ಚಿಕ್ಕೋಡಿ, ನ.7 : ಶಾಲಾ ವಾಹನ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೆ ಸಾವಿಗೀಡಾದ  ಘಟನೆ ಚಿಕ್ಕೋಡಿ ಜಿಲ್ಲೆಯ ಪಟ್ಟಣದಲ್ಲಿ ನಡೆದಿದೆ.
ಶಾಲಾ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ನಡೆದಿದೆ. ಚಿಕ್ಕೋಡಿ ಪಟ್ಟಣದ ಸೇಂಟ್ ಫ್ರಾನ್ಸಿಸ್ ಶಾಲೆಗೆ ಸೇರಿದ ಬಸ್ ಢಿಕ್ಕಿ ಹೊಡೆದು, 5 ವರ್ಷದ ಬಾಲಕಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾಳೆ.
ತಾಯಿ ಹಾಗೂ ಸಹೋದರ ಮಾವನೊಂದಿಗೆ ಬೈಕ್ ಮೇಲೆ ಹೊರಟಿದ್ದಳು. ರಾಜನಂದಿನಿ ತಾಯಿ ಹಾಗೂ ಮಾವನಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿವೆ.
ತಿರುವಿನಲ್ಲಿ ಅತಿ ವೇಗದ ಬಸ್ ಚಲಾವಣೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos