ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಉತ್ತಮವಾಗಿ ಅಭ್ಯಾಸ ಮಾಡಿ

ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಉತ್ತಮವಾಗಿ ಅಭ್ಯಾಸ ಮಾಡಿ

ಬೆಂಗಳೂರು, ಜೂ.24: ಮಹದೇವಪುರ, ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಉತ್ತಮವಾಗಿ ಅಭ್ಯಾಸ ಮಾಡಿ ಯಶಸ್ಸು ಸಾಧಿಸಬೇಕು ಎಂದು ರಾಜ್ಯ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಪಿ.ಎಸ್.ಸಂಧು ತಿಳಿಸಿದರು.

ಕ್ಷೇತ್ರದ ಕಿತ್ತಗನೂರು ಸರ್ಕಾರಿ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿಕ್ಕಂದಿನಿಂದಲೇ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಂಡು ಉತ್ತಮವಾಗಿ ಅಭ್ಯಾಸದಲ್ಲಿ ನಿರತರಾದರೆ ಅಭ್ಯಾಸ ಕಠಿಣ ಎನಿಸುವುದಿಲ್ಲ. ಕಠಿಣ ಅಭ್ಯಾಸ ಬಲವೆ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ವಿದ್ಯಾರ್ಥಿಗಳು ನಿರಂತರವಾದ ಕಲಿಕೆಯ ಮೂಲಕ ಅಗಾಧವಾದುದನ್ನು ಸಾಧಿಸಿ ತಂದೆ ತಾಯಿ, ಪೋಷಕರಿಗೆ ಗೌರವ ತರುವಂತಾಗಬೇಕು ಎಂದರು.

ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿಯಲ್ಲಿನ ಸವಲತ್ತುಗಳನ್ನು ಪಡೆದು ನಾಡಿಗೆ ಗೌರವ ತರಬೇಕು. ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಇಂಗ್ಲಿಷ್ ಕಠಿಣ ಅನಿಸಬಹುದು ಆದರೆ ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಪಡೆದರೆ ಭಾರತದಲ್ಲಿ ಅಷ್ಟೇ ಅಲ್ಲ ಹೊರದೇಶಗಳಲ್ಲೂ ಕೆಲಸ ಮಾಡಲು ಅನುಕೂಲವಾಗಬಹುದು. ಕನ್ನಡ ಭಾಷೆಯನ್ನು ಪ್ರಥಮ ಭಾಷೆಯಯಾಗಿ ಕಲಿತು ಕನ್ನಡದ ಕಂಪನ್ನು ನಾಡಿನೆಲ್ಲೆಡೆ ಪಸರಿಸುವಂತೆ ವಿದ್ಯಾರ್ಥಿಗಳು ಕಿವಿಮಾತು ಹೇಳಿದರು.

ಕಿತ್ತಗನೂರಿನ ಮುಖಂಡ ಹಾಗೂ ವಕೀಲರಾದ ಜೆ.ಪೂಜಪ್ಪ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸತತವಾಗಿ ಬಡವಿದ್ಯಾರ್ಥಿಗಳಿಗಾಗಿ ಉಚಿತವಾಗಿ ನೋಟ್ ಪುಸ್ತಕ ವಿತರಿಸುತ್ತಿದ್ದೇವೆ. ಕಿತ್ತಗನೂರಿನ ಸುತ್ತಮುತ್ತಲಿನ ಸರ್ಕಾರಿ ಸ್ವಾಮ್ಯದ, ಅನುದಾನಿತ ಶಾಲೆಗಳ ಬಡಮಕ್ಕಳನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ಉಚಿತವಾಗಿ ನೋಟ್ ಪುಸ್ತಕ, ಪೆನ್ನು,ಪೆನ್ಸಿಲ್ ವಿತರಿಸಿದ್ದೇವೆ. ಬಡ ಕೂಲಿ ಕಾರ್ಮಿಕರ ಮಕ್ಕಳು ಬಡತನದ ಕಾರಣದಿಂದ ನೋಟ್ ಪುಸ್ತಕ ಕೊಳ್ಳದೆ ಇರಬಹುದು ಇಂತವರಿಗೆ ನಾವು ಸೌಲಭ್ಯ ಕಲ್ಪಿಸಿರುವುದು ಅನುಕೂಲವಾಗುತ್ತದೆ ಎಂದು ಹೇಳಿದರು .

ಜಿ.ಪಂ ಸದಸ್ಯೆ ಮಹಾಲಕ್ಷ್ಮಿ. ತಾ.ಪಂ ಉಪಾಧ್ಯಕ್ಷೇ ಭಾಗ್ಯಮ್ಮ ಸತೀಶ್.ಪಟೇಲ್ ನಾಗೇಶ್. ರಮೇಶ್ ಬಾಬು.ಎಂ ಮಹದೇವ ಮತ್ತಿತರರು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos