ಆರೋಗ್ಯಕ್ಕೆ ಸಹಕಾರಿ ಸ್ಟ್ರಾಬೆರ್ರಿ

ಆರೋಗ್ಯಕ್ಕೆ ಸಹಕಾರಿ ಸ್ಟ್ರಾಬೆರ್ರಿ

ನ್ಯೂಸ್ ಎಕ್ಸ್ ಪ್ರೆಸ್, ಮಾ.20: ಕೆಂಬಣ್ಣದ ಚೆಂದದ ಹಣ್ಣು ಸ್ಟ್ರಾಬೆರ್ರಿ. ದೇಹಕ್ಕೆ ಅನೇಕ ಆರೋಗ್ಯ ಸಹಕಾರಿ ಗುಣಗಳನ್ನು ತಂದುಕೊಡಬಲ್ಲದು. ಈ ಸ್ಟ್ರಾಬೆರ್ರಿ ಸೇವನೆಯಿಂದಾಗುವ ಉಪಯುಕ್ತತೆಗಳ ಬಗ್ಗೆ ಈ ಲೇಖನದ ಬಗ್ಗೆ ತಿಳಿದುಕೊಳ್ಳಲು ಒಮ್ಮೆ ಇದನ್ನು ಓದಿ..

ಸ್ಟ್ರಾಬೆರ್ರಿಯು ಫೋಲೇಟ್​ನ ಉತ್ತಮ ಮೂಲ. ರಕ್ತನಾಳಗಳಿಗೆ ಸಂಬಂಧಿಸಿದ ರೋಗಗಳಿಗೆ ಮತ್ತು ವ್ಯತಿರಿಕ್ತ ಅರಿವಿನ ಕ್ರಿಯೆಗೆ ಫೋಲಿಕ್ ಆಮ್ಲದ ಕೊರತೆಯು ಕಾರಣವಾಗುತ್ತದೆಂದು ಕೆಲವು ಅಧ್ಯಯನಗಳು ತಿಳಿಸುತ್ತವೆ. ಆದ್ದರಿಂದ ಅಗತ್ಯ ಪ್ರಮಾಣದಲ್ಲಿ ಫೋಲಿಕ್ ಆಮ್ಲವನ್ನು ನೀಡುವಂತಹ ಆಹಾರಪದಾರ್ಥಗಳ ಆಯ್ಕೆಯು ಈ ಎಲ್ಲ ತೊಂದರೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೃದಯಸಂಬಂಧಿತ ಸಮಸ್ಯೆಗಳ ನಿರ್ವಹಣೆ ಮತ್ತು ಇವುಗಳಿಂದ ದೂರವಿರಿಸಲು ಸ್ಟ್ರಾಬೆರ್ರಿಯ ಸೇವನೆಯು ಅನುಕೂಲಕಾರಿ.

ಸ್ಟ್ರಾಬೆರ್ರಿಯು ದೇಹದಲ್ಲಿ ಆಗುವ ಉರಿಯೂತವನ್ನು ಕಡಿಮೆ ಮಾಡುವ, ದೇಹದಲ್ಲಿ ಎಲ್.ಡಿ.ಎಲ್. ಎಂಬ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಏರು ಒತ್ತಡವನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ. 2013ರಲ್ಲಿ ಪ್ರಕಟವಾದ ಅಧ್ಯಯನವು – ಪ್ರತಿನಿತ್ಯ ಸ್ಟ್ರಾಬೆರ್ರಿಯ ಸೇವನೆಯು ಹೃದಯಾಘಾತದ ಸಂಭವವನ್ನು ಶೇ. 32ರಷ್ಟು ಕಡಿಮೆ ಮಾಡುತ್ತದೆಂದು ಸಾಬೀತುಪಡಿಸಿದೆ. ಸ್ಟ್ರಾಬೆರ್ರಿಯು ಹೆಚ್ಚಿನ ಪ್ರಮಾಣದಲ್ಲಿ ಸಿ ವಿಟಮಿನ್ ಹೊಂದಿದೆ. ಕೇವಲ ಒಂದು ಕಪ್ ಸ್ಟ್ರಾಬೆರ್ರಿಯು ಇಡೀ ದಿನದ ಅಗತ್ಯಕ್ಕಿಂತ ಅಧಿಕವಾದಂತಹ ವಿಟಮಿನ್ ಸಿ ಪೂರೈಸಬಲ್ಲದೆಂಬುದು ವಿಶೇಷ. ಅಧಿಕ ರಕ್ತದೊತ್ತಡವನ್ನು ಹತೋಟಿ ಮಾಡಲು ಸ್ಟ್ರಾಬೆರ್ರಿ ಸೇವನೆ ಸಹಕಾರಿ.

ನಾರಿನಂಶವನ್ನು ಸ್ಟ್ರಾಬೆರ್ರಿಯು ಅಧಿಕ ಪ್ರಮಾಣದಲ್ಲಿ ಹೊಂದಿದೆ. ಜೀರ್ಣಕ್ರಿಯೆಯನ್ನು ಉದ್ದೀಪನಗೊಳಿಸಲು, ಮಲಬದ್ಧತೆ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಲು, ಅನಿಯತ ಮಲವಿಸರ್ಜನೆಯನ್ನು ಕಡಿಮೆ ಮಾಡಲು ಸಹ ಸ್ಟ್ರಾಬೆರ್ರಿ ಸಹಕಾರಿ. ಆಂಟಿ ಆಕ್ಸಿಡೆಂಟ್​ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಟ್ರಾಬೆರ್ರಿಯು ಹೊಂದಿರುವುದರಿಂದ ನಮ್ಮ ದೇಹಕ್ಕೆ, ನಮ್ಮ ಕೋಶಗಳಿಗೆ ಆಗಬಹುದಾದ ಯಾವುದೇ ರೀತಿಯ ಹಾನಿಯಿಂದ ರಕ್ಷಿಸಲು ಸಹಕಾರಿಯಾಗುತ್ತದೆ. ಪ್ರೀರ್ಯಾಡಿಕಲ್​ನಿಂದಾಗುವ ಹಾನಿಯನ್ನು ತಡೆಯಲು ಸಹಕಾರಿ. ನಾಳಿನ ಅಂಕಣದಲ್ಲಿ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಫ್ರೆಶ್ ನ್ಯೂಸ್

Latest Posts

Featured Videos