ಈ ಎಣ್ಣೆ ಬಳಕೆ ಮಾಡಿದರೆ ಸಧೃಢ, ನೀಳ ಕೂದಲು ನಿಮ್ಮದಾಗುತ್ತೆ..

ಈ ಎಣ್ಣೆ ಬಳಕೆ ಮಾಡಿದರೆ ಸಧೃಢ, ನೀಳ ಕೂದಲು ನಿಮ್ಮದಾಗುತ್ತೆ..

ನ್ಯೂಸ್ ಎಕ್ಸ್ ಪ್ರೆಸ್, ಮಾ.16: ಕೇರಳದ ಮಹಿಳೆಯರ ಕೂದಲು ಸದೃಢವಾಗಿ, ಕಪ್ಪಾಗಿ, ನೀಳವಾಗಿ ಬೆಳೆದಿರೋದನ್ನು ನಾವು ಕಾಣುತ್ತೇವೆ. ಇದಕ್ಕೆ ಕಾರಣ ಏನು ಗೊತ್ತಾ? ಅವರು ಯಾವುದೊ ಎಣ್ಣೆಯನ್ನು ಬಳಕೆ ಮಾಡುವುದಿಲ್ಲ.

ಮನೆಯಲ್ಲಿಯೇ ತಯಾರಿಸಿದಂತಹ ಹರ್ಬಲ್ ಎಣ್ಣೆಯನ್ನು ಬಳಕೆ ಮಾಡುತ್ತಾರೆ. ಇದನ್ನು ನೀವು ಸಹ ಬಳಕೆ ಮಾಡಿದರೆ ನಿಮ್ಮ ಕೂದಲು ಅಷ್ಟೇ ಸೊಂಪಾಗಿ ಬೆಳೆಯೋದರಲ್ಲಿ ಸಂಶಯವಿಲ್ಲ.

ಬೇಕಾಗುವ ಸಾಮಗ್ರಿಗಳು : ದಾಸವಾಳ ಹೂವು, ತೆಂಗಿನ ಎಣ್ಣೆ, ಮೆಹೆಂದಿ ಎಲೆ, ಕರಿಬೇವಿನ ಸೊಪ್ಪು, ದಾಸವಾಳದ ಎಲೆ, ಸಣ್ಣ ಈರುಳ್ಳಿ.

ತಯಾರಿಸುವ ವಿಧಾನ :ತೆಂಗಿನ ಎಣ್ಣೆಯನ್ನು ಕುದಿಯಲು ಇತ್ತು ಬೇರೆಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಜಜ್ಜಿ ಅಥವಾ ಮಿಕ್ಸಿ ಮಾಡಿಕೊಂಡು ಎಣ್ಣೆಗೆ ಹಾಕಿ. ಎಲ್ಲವೂ ಚೆನ್ನಾಗಿ ಕಾದು ಎಣ್ಣೆಯ ಬಣ್ಣ ಬದಲಾದ ಮೇಲೆ ಸ್ಟೌ ಆಫ್ ಮಾಡಿ.

ಈ ಎಣ್ಣೆ ತಣ್ಣಗಾದ ಮೇಲೆ ಒಂದು ಡಬ್ಬಿಯಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಿ. ಇದನ್ನು ವಾರದಲ್ಲಿ ಮೂರು ಬಾರಿ ಹಾಕಿ ಅಥವಾ ನಿತ್ಯವೂ ಹಾಕಿದರೆ ಉತ್ತಮ. ಇದರಿಂದ ಸುಂದರ ಸದೃಢ ಕೂದಲು ನಿಮ್ಮದಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos