ಸೆಪ್ಟೆಂಬರ್ 8ರಂದು ‘ಕದ್ದ ಚಿತ್ರ’ ತೆರೆಯ ಮೇಲೆ!

ಸೆಪ್ಟೆಂಬರ್ 8ರಂದು ‘ಕದ್ದ ಚಿತ್ರ’ ತೆರೆಯ ಮೇಲೆ!

ಬೆಂಗಳೂರು: ನಮ್ಮ ಸ್ಯಾಂಡಲ್ವುಡ್ ನಲ್ಲಿ ಅನೇಕ ಕಹಿ ಘಟನೆಗಳು ಒಂದಾದ ಮೇಲೆ ಒಂದು ನಡೆಯುತ್ತಾ ಬಂದಿದೆ. ಅದೇ ತರ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಘಾತದಿಂದ ನಿಧನರಾಗಿದ್ದರು. ಅವರ ಅಗಲಿಕೆಯಿಂದ ವಿಜಯ ರಾಘವೇಂದ್ರ ಅವರ ಕದ್ದ ಚಿತ್ರ ಆಗಸ್ಟ್ 25ರಂದು ರಿಲೀಸ್ ಆಗಬೇಕಾಗಿತ್ತು. ಆದರೆ ರಿಲೀಸ್ ದಿನಾಂಕವನ್ನು ಮುಂದೂಡಿದ್ದರು.
ವಿಜಯ್ ರಾಘವೇಂದ್ರ ಅವರ ಬಾಳಲ್ಲಿ ಈ ತಿಂಗಳು ಕಹಿ ಘಟನೆ ಸಂಭವಿಸಿತು. ಅವರ ಪತ್ನಿ ಸ್ಪಂದನಾ ಮೃತಪಟ್ಟರು. ಈಗ ಅವರು ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಆದರೂ ಜೀವನ ಸಾಗಲೇಬೇಕು. ಆದರೆ, ಕಾರಣಾಂತರಗಳಿಂದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿತ್ತು. ಈಗ ತಂಡದವರು ಹೊಸ ಬಿಡುಗಡೆ ದಿನಾಂಕ ತಿಳಿಸಿದ್ದಾರೆ. ನೋವಿನಲ್ಲೂ ವಿಜಯ್ ಸಿನಿಮಾ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ.
ಸೆಪ್ಟೆಂಬರ್ 8ರಂದು ‘ಕದ್ದ ಚಿತ್ರ’ ತೆರೆಗೆ ಬರುತ್ತಿದೆ. ಸುಹಾಸ್ ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಂದೀಪ್ ಎಚ್.ಕೆ. ನಿರ್ದೇಶನ ಮಾಡಿದ್ದಾರೆ. ವಿಜಯ್ ರಾಘವೇಂದ್ರ, ನಮ್ರತಾ ಸುರೇಂದ್ರನಾಥ್, ರಾಘು ಶಿವಮೊಗ್ಗ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ವಿಜಯ್ ರಾಘವೇಂದ್ರ ಹಾಜರಿ ಹಾಕಿ ಕಣ್ಣೀರು ಹಾಕಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos