ತಮಿಳುನಾಡಿನಲ್ಲಿ ಮತ್ತೆ ಜಲ್ಲಿಕಟ್ಟು ಗಲಾಟೆ

ತಮಿಳುನಾಡಿನಲ್ಲಿ ಮತ್ತೆ ಜಲ್ಲಿಕಟ್ಟು ಗಲಾಟೆ

ಆನೇಕಲ್: ನಗರದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಗ್ರಾಮವೊಂದರಲ್ಲಿ ಅನುಮತಿಯಿಲ್ಲದೇ ಜಲ್ಲಿಕಟ್ಟು ಕ್ರೀಡೆ ಏರ್ಪಡಿಸಿದ್ದು, ಅದನ್ನು ನಿಲ್ಲಿಸಲು ಹೋದ ಪೊಲೀಸರ ಮೇಲೆ ಗ್ರಾಮಸ್ಥರು ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಆನೇಕಲ್ ಗಡಿಗೆ ಹೊಂದಿಕೊಂಡಿರೋ ತಮಿಳುನಾಡಿನ ವ್ಯಾಪನಪಲ್ಲಿಯಲ್ಲಿ 2 ದಿನಗಳ ಹಿಂದೆ ಈ ಘಟನೆ  ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಪೊಲೀಸರು ಹಾಗೂ ಗ್ರಾಮಸ್ಥರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಗ್ರಾಮದ 30 ಆರೋಪಿಗಳನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ಜನವರಿ ತಿಂಗಳಿಂದ ಸತತ 3 ತಿಂಗಳು ತಮಿಳುನಾದಿನಾದ್ಯಂತ ನಡೆಯಲಿರುವ ಜಲ್ಲಿ ಕಟ್ಟು ಕ್ರೀಡೆ. ಈ ಹಿಂದೆ ಪ್ರಾಣಿ ದಯಾ ಸಂಘದಿಂದ ಸುಪ್ರೀಂಕೋರ್ಟ್ ನಲ್ಲಿ ಕೇಸು ದಾಖಲಿಸಿ ಜಲ್ಲಿಕಟ್ಟು ನಿಷೇಧವಾಗಿತ್ತು. ಕಳೆದ ವರ್ಷದಿಂದ ಮತ್ತೆ ಶುರುವಾಗಿರುವ ಜಲ್ಲಿಕಟ್ಟು ಆಚರಣೆ.

ಫ್ರೆಶ್ ನ್ಯೂಸ್

Latest Posts

Featured Videos