ಹೆಜ್ಜೆ ಹಾಕಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ

ಹೆಜ್ಜೆ ಹಾಕಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ

ತುಮಕೂರು, ಡಿ. 20 : ಶಾಲಾ ಪುಟ್ಟಾಣಿಗಳು ತಮ್ಮ ಶಾಲಾ ವಾರ್ಷಿಕೋತ್ಸವದಲ್ಲಿ ಪುಟ್ಟಪುಟ್ಟ ಹೆಜ್ಜೆ ಹಾಕುವ ಮೂಲಕ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಹೆಜ್ಜೆ ಹಾಕುವ ಮೂಲಕ ತುಮಕೂರು ನಗರದ ಎಸ್ಎಸ್ ಪುರಂನಲ್ಲಿರುವ ಮಾರುತಿ ವಿದ್ಯಾಕೇಂದ್ರದ ಒಂದನೇ ತರಗತಿ ವಿದ್ಯಾರ್ಥಿಗಳು ನೃತ್ಯದ ಮೂಲಕ ಪ್ಲಾಸ್ಟಿಕ್ ಬಳಕೆಯಿಂದಾಗುವ ತೊಂದರೆಯನ್ನು ತೆರೆದಿಟ್ಟಿದ್ದಾರೆ. ಪ್ಲಾಸ್ಟಿಕ್ ಕುರಿತಾದ ಟಿಕ್ ಟಿಕ್ ಟಿಕ್ ಟಿಕ್ ಎನ್ನುವ ಹಿಂದಿ ಹಾಡಿಗೆ ಪುಟಾಣಿಗಳು ಹೆಜ್ಜೆ ಹಾಕಿದ್ದಾರೆ. ವೇದಿಕೆ ಮುಂದೆ ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಿದ್ದರೆ, ಹಿಂಭಾಗದ ಪರದೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯದಿಂದಾಗುವ ಪರಿಣಾಮಗಳ ದೃಶ್ಯಾವಳಿಗಳು ಮೂಡುತ್ತಿದ್ದವು. ವಿಶೇಷ ಎಂದರೆ ಪ್ರಧಾನಿ ಮೋದಿ ಕಡಲ ಕಿನಾರೆಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಶುಚಿಗೊಳಿಸುವ ದೃಶ್ಯಾವಳಿ ಕಂಡು ಬಂದಿತ್ತು.

ಫ್ರೆಶ್ ನ್ಯೂಸ್

Latest Posts

Featured Videos