ಕೌಶಲಾಭಿವೃದ್ಧಿಗೆ ರಾಜ್ಯ ಪ್ರವಾಸ: ಕೆ. ರತ್ನಪ್ರಭಾ

ಕೌಶಲಾಭಿವೃದ್ಧಿಗೆ ರಾಜ್ಯ ಪ್ರವಾಸ: ಕೆ. ರತ್ನಪ್ರಭಾ

ಬೆಂಗಳೂರು, ಡಿ. 27: ರಾಜ್ಯದ ಪ್ರತಿ ಜಿಲ್ಲೆ ಹಾಗೂ ಬೆಂಗಳೂರು ನಗರದ ಪ್ರತಿ ಕಶಲಾಭಿವೃದ್ಧಿ ತರಭೇತಿ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯವೈಖರಿ  ಪರಿಶೀಲನೆ  ಮಾಡುವುದಾಗಿ ರಾಜ್ಯ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷರಾದ ರತ್ನಪ್ರಭಾ ಅವರು ತಿಳಿಸಿದರು.

ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಪ್ರಜಾವಾಹಿನಿ ದಿನ ಪತ್ರಿಕೆ ಮುಖ್ಯಸ್ಥರಾದ ಸ್ವಾಮಿ ಹಾಗೂ ಪತ್ರಕರ್ತರು ಭೇಟಿ ನೀಡಿ ಅಭಿನಂದಿಸಿದ ಸಂಧರ್ಭದಲ್ಲಿ ಮಾತನಾಡಿ, ಅಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿಯ ರೂಪುರೇಷೆಗಳನ್ನು ವಿವರಿಸಿದರು.

ಸರ್ಕಾರದ ಅನುದಾನ ಬಳಕೆ ಮಾಡಿಕೊಂಡು ಸಮರ್ಪಕವಾಗಿ ತರಬೇತಿ ನೀಡದ ಕೇಂದ್ರಗಳ ತನಿಖೆ ಮಾಡುವುದಾಗಿ ತಿಳಿಸಿದ ರತ್ನಪ್ರಭಾ ಅವರು ತರಬೇತಿ ಹೊಂದಿರುವ ಶಿಬಿರಾರ್ಥಿಗಳಿಗೆ ಉದ್ಯೋಗ ಮತ್ತು ಉಪಾದೊ ಕೊಡಿಸುವುದಾಗಿ ಇದೇ ವೇಳೆ ಭರವಸೆ ನೀಡಿದರು.

ತರಬೇತಿ ಕೇಂದ್ರಗಳು ಕೇವಲ ಅಲಂಕೃತವಾಗಿರದೆ ಕಾರ್ಯತತ್ಪರವಾಗಿರಬೇಕೆಂದ ಅವರು ಒಂದು ವಾರದೊಳಗೆ ಪ್ರಾಧಿಕಾರದ ಉನ್ನತ ಮಟ್ಟದ ಆಧಿಕಾರಿಗಳ ಸಭೆ ಕರೆದು ಚರ್ಚಿಸಿ ಚುರುಕುಗೊಳಿಸಲಾಗುವುದೆಂದರು. ಪೌರ ಕಾರ್ಮಿಕರ ಮಕ್ಕಳು, ಕೊಳಚೆ ಪ್ರದೇಶದ ವಿದ್ಯಾವಂತ ಯುವಕರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಕೌಶಲಾಧಾರಿತ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.

ರತ್ನಪ್ರಭಾ ಅವರ ಜನಪ್ರಿಯತೆ ಹಾಗೂ ಜನಪರ ಕಾಳಜಿಯುಳ್ಳವರಾಗಿರುವ ಹಿನ್ನೆಲೆಯಲ್ಲಿ ಸಂಘ ಸಂಸ್ಥೆಗಳು ಹಾಗೂ ಸಹವರ್ತಿಗಳು ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ವಿವಿದ ಸಂಘಟನೆಗಳ ಮುಖಂಡರುಗಳು ತಂಡೋಪ ತಂಡವಾಗಿ ಭೇಟಿ ನೀಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇಂದು ಕೌಶಲಾಭಿವೃದ್ಧಿ ಕಚೇರಿಗೆ ಪ್ರಜಾವಾಹಿನಿ ದಿನ ಪತ್ರಿಕೆಯ ಮಾಲೀಕರಾದ ಸ್ವಾಮಿ ಅವರು ತಮ್ಮ ಪತ್ರಿಕೆಯ ನೆನಪಿನ ಕಾಣಿಕೆ ನೀಡುವ ಮೂಲಕ ಅಭಿನಂದಿಸಿದರು ಸ್ವಾಮಿ ಅವರೊಂದಿಗೆ ಪತ್ರಿಕಾ ಸಂಪಾದಕರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos