ರಾಜ್ಯಮಟ್ಟದ  ಅಂತರ್ ಶಾಲಾ  ಮೇಯರ್ ಕಪ್ 2019

ರಾಜ್ಯಮಟ್ಟದ  ಅಂತರ್ ಶಾಲಾ  ಮೇಯರ್ ಕಪ್ 2019

 

 

ಬೆಂಗಳೂರು, ಸೆ. 15: 2 ದಿನಗಳ ಕಾಲ ನಡೆದ ರಾಜ್ಯಮಟ್ಟದ  ಅಂತರ್ ಶಾಲಾ  ಮೇಯರ್ ಕಪ್ 2019ರ ವಾಲಿಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರು ಸೇಂಟ್ಸ್ ಜೋಸೆಫ್ ಸ್ಕೂಲ್  ಬ್ರಾಂಡ್ಯ ಸ್ಕ್ವಾಯರ್ ಶಾಲೆಯ ಬಾಲಕರು ಮತ್ತು  ಶ್ರೀ ಶಾರದಾ ವಿದ್ಯಾನಿಕೇತನ ಶಾಲೆ ಬಾಲಕಿಯರ ತಂಡಗಳು ಚಾಂಪಿಯನ್ ಆಗಿ ಹೊರ ಹೊಮ್ಮಿವೆ. `ಸರ್ಕಾರಿ, ಅನುದಾನ ಹಾಗೂ ಖಾಸಗಿ ಶಾಲೆಗಳಿಂದ ಸುಮಾರು 65 ತಂಡಗಳು ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ಪಂದ್ಯಾವಳಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿದ ತಂಡಗಳಿಗೆ ಮೇಯರ್ ಕಪ್  ಕಪ್ 2019 ನೀಡಿ ಗೌರವಿಸಲಾಗುವುದು. ಶಾಲಾ ಮಕ್ಕಳಲ್ಲಿ ಕ್ರೀಡಾಪ್ರೀತಿಯನ್ನು ಬೆಳೆಸುವ ಉದ್ದೇಶದಿಂದ ಪ್ರತಿವರ್ಷ ಈ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಅದರಂತೆ, ಪುಟ್ಟ ಮಕ್ಕಳಲ್ಲಿ ಅಡಗಿರುವ, ಅದರಲ್ಲೂ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಆಟೋಟ ಜಗತ್ತಿಗೆ ಪರಿಚಯಿಸುವುದು ಈ ಪಂದ್ಯಾವಳಿಯ ಮುಖ್ಯ ಉದ್ದೇಶ ಎನ್ನುತ್ತಾರೆ  ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್.

ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ನಡೆದ ಪೈನಲ್ ಪಂದ್ಯ ವೀಕ್ಷಿಸಿದ ಭೈರಸಂದ್ರವಾರ್ಡ್ ಪಾಲಿಕೆ ಸದಸ್ಯ ಎನ್ ನಾಗರಾಜ್ ಹಾಗೂ  ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಶಾಸಕಿ ಸೌಮ್ಯಾರೆಡ್ಡಿ ಅವರು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಎನ್. ನಾಗರಾಜ್, ಶಾಲಾ ಮಕ್ಕಳಲ್ಲಿ ಕ್ರೀಡಾಪ್ರೀತಿ ಬೆಳೆಸುವ ಉದ್ದೇಶದಿಂದ ಪ್ರತಿವರ್ಷ ಈ  ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದೇವೆ. ಪುಟ್ಟ ಮಕ್ಕಳಲ್ಲಿರುವ  ಕ್ರೀಡಾ ಪ್ರತಿಭೆಗಳನ್ನು ಪರಿಚಯಿಸಲು ಈ ವೇದಿಕೆ ಸಹಕಾರಿಯಾಗಲಿದೆ. ವಾಲಿಬಾಲ್ ಗೆ ವಿಶೇಷ ಆದ್ಯತೆ ನೀಡಿದ್ದು, ಇಂತಹ ಕ್ರೀಡಾ ಕೂಟಗಳಲ್ಲಿ ಪಾಲ್ಗೊಂಡಾಗ ಮಕ್ಕಳ ಕ್ರೀಡಾ ಬದುಕು ಅರಳುತ್ತದೆ. ಕ್ರೀಡೆ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸುತ್ತದೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos