ಫೆ 26-27ರಂದು ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ!

ಫೆ 26-27ರಂದು ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ!

ಬೆಂಗಳೂರು: ಯುವ ಸಮೃದ್ಧಿ ಸಮ್ಮೇಳನದ ರಾಜ್ಯ ಮಟ್ಟದ ಉದ್ಯೋಗ ಮೇಳದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಭ್ಯರ್ಥಿಗಳು ನೋಂದಣಿ ಹಾಗೂ ಪಾಲ್ಕೊಳ್ಳುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.

ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ರವರ ಸೂಚನೆಯ ಮೇರೆಗೆ ಮಾನ್ಯ ಸಚಿವರು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅವರ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಣಯಿಸಲಾಗಿರುವಂತೆ. ಬೆಂಗಳೂರು ನಗರ ಜಿಲ್ಲೆಯ ಅರಮನೆ ಮೈದಾನದಲ್ಲಿ ಫೆ 26-27ರಂದು ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಆಯೋಜಿಸಲು ತೀರ್ಮಾನಿಸಲಾಗಿದೆ

ಯುವಕರಿಗೆ ಉದ್ಯೋಗ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ  ಶರಣ್ ಪ್ರಕಾಶ್ ಪಾಟೀಲ್ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ವಿಧಾನಸೌಧ ಸಭಾಂಗಣದಲ್ಲಿ ಇಂದು ಪತ್ರಿಕಾಗೋಷ್ಠಿ, ಉದ್ದೇಶಿಸಿ ಮಾತನಾಡಿದ ಪ್ರಿಯಾಂಕ ಖರ್ಗೆ ಅವರು  31 ಸಾವಿರ ಯುವಕರು ಆನ್ ಲೈನ್  ಮೂಲಕ ರಿಜಸ್ಟೇಷನ್ ಮಾಡಿಕೊಂಡಿದ್ದಾರೆ. ಈ ರಾಜ್ಯದ ಯುವಕರ ಭವಿಷ್ಯ ನಿರ್ಮಾಣ ಮಾಡಬೇಕು. ಹೀಗಾಗಿ 500ಕ್ಕೂ ಹೆಚ್ಚು ಕಂಪನಿಗಳು ಇದರಲ್ಲಿ ಭಾಗಿಯಾಗಲಿದೆ, ಎಂದರು. ಗ್ರೌಂಡಲ್ಲಿ ನಡೆಯಲಿರುವ ಈ ಬೃಹತ್ ಉದ್ಯೋಗ ಮೇಳಕ್ಕೆ ಜಯಮಹಾಲ್ ಹಾಗೂ ಪ್ಯಾಲೇಸ್ ರಸ್ತೆ ಮೂಲಕ ಪ್ರವೇಶ ಇರಲಿದೆ.

ಬಸ್ ನಿಲ್ದಾಣದಿಂದ ಉದ್ಯೋಗ ಮೇಳಕ್ಕೆ ಬರಲು ಸೂಕ್ತ ಬಸ್ ವ್ಯವಸ್ಥೆ ಸಹ ಇರಲಿದೆ.  ಮುಖ್ಯವಾಗಿ ಯುವನಿಧಿಯಲ್ಲಿ ರಿಜಿಸ್ಟೇಷನ್  ಮಾಡಿಕೊಂಡವರಿಗೆ ಮೊದಲ ಆದ್ಯತೆ ಇರಲಾಗುವುದು. ಉದ್ಯೋಗ ಮೇಳ ನಿರಂತರವಾಗಿ ನಡೆಯಲಿದೆ. ಯುವ ಸಮೃದ್ಧಿ ರಿಜಿಸ್ಟೇಷನ್ ಆದವರ ಕಂಪ್ಲೀಟ್ ಡಿಟೇಲ್ಸ್ ನಮ್ಮ ಜೊತೆಗೆ ಇರಲಿದೆ, ಖರ್ಗೆ ತಿಳಿಸಿದರು.

ಐಟಿ ಬಿಟಿಯಲ್ಲಿ ಎಷ್ಟು ಹುದ್ದೆ ಖಾಲಿ ಇದೆ. ಅದನ್ನು ತಿಳಿಸುವ ಕೆಲಸ ಮಾಡುತ್ತೇವೆ. 2.5 ಲಕ್ಷ ಜನ ಒಟ್ಟು ಸಮೃದ್ಧಿ ಮೇಳದ ಬಗ್ಗೆ ಮಾಹಿತಿ ಕೊಡುತ್ತೇವೆ.ಉದ್ಯೋಗ ಮೇಳಕ್ಕೆ  60 ರಿಂದ 70 ಸಾವಿರ ಜನರು ಬರುವ ನಿರೀಕ್ಷೆ ಇದೆ.ಹಿಂದಿನ ಉದ್ಯೋಗ ಮೇಳಕ್ಕೆ ಇಂದಿನ ಉದ್ಯೋಗ ಮೇಳಕ್ಕೆ ಅಜಗಜಾಂತರ ವ್ಯತ್ಯಾಸ ಇದೆ, ಎಂದು ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯೋಗ ಸೃಷ್ಟಿ ಮಾಡ್ತೀವಿ ಅಂತ ಹೇಳಿದ್ರು. ನಮ್ಮ ಅವಧಿಯಲ್ಲಿ  10 ವರ್ಷಗಳಲ್ಲಿ ಅನೇಕ ಐಟಿ ಕಂಪನಿ ಸ್ಥಾಪನೆ ಮಾಡಿದೆ. ಉದ್ಯೋಗ ಸೃಷ್ಟಿ ಮಾಡುವ ಜೊತೆಗೆ ಮಾನವ ಸಂಪನ್ಮೂಲಕ್ಕೆ ಉತ್ತೇಜನ ನೀಡಬೇಕು.  ಈ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಉದ್ಘಾಟನೆ ಮಾಡಿ ಚಾಲನೆ  ನೀಡಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos