ಸರ್ಕಾರಿ ಶಾಲೆಯಲ್ಲಿ ‘ಎಲ್‍ಕೆಜಿ’ ಕ್ಲಾಸ್‍..!

ಸರ್ಕಾರಿ ಶಾಲೆಯಲ್ಲಿ ‘ಎಲ್‍ಕೆಜಿ’ ಕ್ಲಾಸ್‍..!

ಬೆಂಗಳೂರು, ಮೇ. 15, ನ್ಯೂಸ್ ಎಕ್ಸ್ ಪ್ರೆಸ್: ಸರ್ಕಾರಿ ಶಾಲೆ ಎಂದು ಮೂಗು ಮುರಿಯೋರೆ ಹೆಚ್ಚು. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸೋದಕ್ಕೆ ಪೋಷಕರು ಹಿಂದೇಟು ಹಾಕ್ತಿದ್ದಾರೆ. ಈ ಕಾರಣಕ್ಕೆ ಸರ್ಕಾರಿ ಶಾಲೆಗಳು ಮುಚ್ಚೋ ಹಂತಕ್ಕೆ ಹೋಗಿವೆ. ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಸರ್ಕಾರ ಪ್ಲಾನ್ ಮಾಡಿದೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವ್ಯವಸ್ಥೆಯಲ್ಲಿ ಸದ್ಯ ಪ್ರಾಥಮಿಕ ಪೂರ್ವ ಶಿಕ್ಷಣ ಪದ್ಧತಿ ಇಲ್ಲ.  ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಪೂರ್ವ ಎಲ್‍ಕೆಜಿ ತರಗತಿಗಳನ್ನು ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದರಿಂದ ಲಕ್ಷಗಟ್ಟಲೆ ಖಾಸಗಿ ಶಾಲೆಗಳಿಗೆ ಫೀಜ್‍ ಕಟ್ಟೋಕೆ ಕಷ್ಟಪಡ್ತಿದ್ದ ಬಡ ಪೋಷಕರ ಕನಸು ಈಡೇರುವ ಕಾಲ ದೂರವಿಲ್ಲ.

‘ಪಬ್ಲಿಕ್ ಸ್ಕೂಲ್’ ಗೆ ಸರ್ಕಾರ ಗ್ರೀನ್‍ ಸಿಗ್ನಲ್‍ !

ಈ ವರ್ಷದಿಂದ ರಾಜ್ಯದಲ್ಲಿ 276 ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳು ಕಾರ್ಯಾರಂಭ ಮಾಡಲಿವೆ.  ಶಿಕ್ಷಣ ಇಲಾಖೆಯು ಈ ವರ್ಷದಿಂದಲೇ ಲೋಯರ್ ಕಿಂಡರ್ ಗಾರ್ಟನ್ ( ಪ್ರಾಥಮಿಕ ಪೂರ್ವ- ಎಲ್ ಕೆಜಿ) ಆರಂಭಿಸಲಿದ್ದು, ಪ್ರಾಥಮಿಕ ಶಿಕ್ಷಣ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು  ಈ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಿದ್ದು, ಸದ್ಯದಲ್ಲೇ ಪ್ರಕ್ರಿಯೆ ಆರಂಭವಾಗಲಿದೆ. ಮುಖ್ಯಮಂತ್ರಿ ಅವರು ಒಪ್ಪಿಗೆ ಸೂಚಿಸಿರುವ ಕಾರಣ, ಇಲಾಖೆಯ ಅಧಿಕಾರಿಗಳು ಒಂದೆರಡು ದಿನಗಳಲ್ಲಿ ಅಧಿಸೂಚನೆ ಮತ್ತು ಪ್ರವೇಶಾತಿ ವೇಳಪಟ್ಟಿ ಪ್ರಕಟಿಸಲಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos