ರಾಜ್ಯ ಬಜೆಟ್: ಮುಖ್ಯಾಂಶಗಳು

ರಾಜ್ಯ ಬಜೆಟ್: ಮುಖ್ಯಾಂಶಗಳು

ಬೆಂಗಳೂರು: ಬಿಜೆಪಿ ಶಾಸಕರ ಗದ್ದಲ, ಹಾಗೂ ಸಭಾತ್ಯಾಗದ ನಡುವೆಯೇ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿಂದು 2019-20ನೇ ಸಾಲಿನ ಬಜೆಟ್‍ ಮಂಡಿಸಿದ್ದಾರೆ.

ಇಲಾಖಾವಾರು ವಿವಿರ

ಕೃಷಿ:

ಕೃಷಿ ಭಾಗ್ಯ, ಸಾವಯವ ಕೃಷಿ, ಶೂನ್ಯ ಬಂಡವಾಳ, ಕೃಷಿ ಹಾಗೂ ಇಸ್ರೇಲ್ ಮಾದರಿ ಕಿರು ನೀರಾವರಿ ಕಾರ್ಯಕ್ರಮಗಳಿಗೆ ಒಟ್ಟಾರೆ ರೂ. 472  ಕೋಟಿ ಅನುದಾನ.

ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಶೇ.90 ರಷ್ಟು ಪ್ರೋತ್ಸಾಹಧನ- 368 ಕೋಟಿ ರೂ. ಅನುದಾನ.

ಬರಪೀಡಿತ ಮತ್ತು ಅತಿಹೆಚ್ಚು ಅಂತರ್ಜಲ ಕುಸಿತ ಇರುವ 100 ತಾಲ್ಲೂಕುಗಳಲ್ಲಿ ಬರನಿರೋಧಕ ಜಲಾನಯನ ಚಟುವಟಿಕೆಗಳ ಅನುಷ್ಠಾನ-100 ಕೋಟಿ ರೂ.

ಸಿರಿಧಾನ್ಯ ಬೆಳೆಗಾರರ ಉತ್ತೇಜನಕ್ಕೆ ‘ರೈತ ಸಿರಿ’ ಯೋಜನೆ- 10 ಕೋಟಿ ರೂ.

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಕ್ಕಾಗಿ 350 ಕೋಟಿ ರೂ. ಅನುದಾನ

ಕರಾವಳಿ ಹಾಗೂ ಮಲೆನಾಡು ಜನರಿಗೆ ಭತ್ತ ಬೆಳೆಯಲು ಉತ್ತೇಜಿಸಲು ‘ಕರಾವಳಿ ಪ್ಯಾಕೇಜ್’ 5 ಕೋಟಿ ರೂ.ಗಳ ಅನುದಾನ. ಪ್ರತೀ ಹೆಕ್ಟೇರ್‍ಗೆ ರೈತರಿಗೆ 7,500 ರೂ. ನೇರ ವರ್ಗಾವಣೆ.

ರಾಮನಗರ , ಧಾರವಾಡ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಮಾವು ಉತ್ಪನ್ನ ಸಂಸ್ಕರಣಾ ಘಟಕ ಹಾಗೂ ಕೋಲಾರದಲ್ಲಿ ಟೊಮೆಟೊ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆಗೆ 20 ಕೋಟಿ ರೂ.

ಮೀನುಗಾರಿಕೆ:  

ಮಲ್ಪೆಯ ಮೀನುಗಾರಿಕೆ ಚಟುವಟಿಕೆಗಳ ಅಭಿವೃದ್ಧಿಗೆ ಜೆಟ್ಟಿ ನಿರ್ಮಾಣ ಹಾಗೂ ತ್ಯಾಜ್ಯ ನಿರ್ವಹಣಾ ಘಟಕ ಹಾಗೂ ನೈರ್ಮಲ್ಯ ಸೌಲಭ್ಯ- ೧೫ ಕೋಟಿ ರೂ. ಅನುದಾನ.

ರೇಷ್ಮೆ:

ಕಚ್ಚಾ ರೇಷ್ಮೆ ದರದಲ್ಲಿ ಸ್ಥಿರತೆ ಕಾಪಾಡಲು ಮಾರುಕಟ್ಟೆ ಮಧ್ಯ ಪ್ರವೇಶಕ್ಕಾಗಿ
ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಬಲಪಡಿಸಲು 10 ಕೋಟಿ ರೂ. ಅನುದಾನ.

ಪಶುಸಂಗೋಪನೆ :

ಹಾಲು ಉತ್ಪಾದಕರ ಪ್ರೋತ್ಸಾಹಧನ ಪ್ರತಿ ಲೀಟರ್‍ಗೆ 6 ರೂ.ಗಳಿಗೆ ಹೆಚ್ಚಳ.

ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2502 ಕೋಟಿ ರೂ. ಅನುದಾನ.

ಮಂಗನ ಕಾಯಿಲೆ ಲಸಿಕೆ ತಯಾರಿಕೆ ಪ್ರೋತ್ಸಾಹಕ್ಕೆ
5 ಕೋಟಿ ರೂ. ಅನುದಾನ

ಕೆರೆ ತುಂಬಿಸುವ ಯೋಜನೆಗೆ ಒಟ್ಟು 1600 ಕೋಟಿ. ಅನುದಾನ.

ಇತರೆ:

200 ಕೋಟಿ ವೆಚ್ಚದಲ್ಲಿ ಬಾದಾಮಿಗೆ ನೀರು ಹರಿಸುವ ಯೋಜನೆಗೆ ಒಪ್ಪಿಗೆ. ಪ್ರತೀ ಸಂತೆಯ ಮೂಲಭೂತ ಸೌಕರ್ಯ ಅಭಿವೃದ್ಧಿ 1 ಕೋಟಿ ರೂ. ಆರಂಭದಲ್ಲಿ 600 ಗ್ರಾಮೀಣ ಸಂತೆಗಳಿಗೆ ಆಧ್ಯತೆ.

ಕೇರಳ ಮಾದರಿಯಲ್ಲಿ ರೈತರ ಸಾಲ ಪರಿಹಾರ ಆಯೋಗ ಸ್ಥಾಪನೆಗೆ ನಿರ್ಧಾರ. ಉಗ್ರಾಣ ನಿಗಮದಲ್ಲಿ ಗರಿಷ್ಟ 8 ತಿಂಗಳ ಕಾಲ ಕೃಷಿ ವಸ್ತುಗಳ ಸಂಗ್ರಹಣೆಗೆ ಅವಕಾಶ.

ಗೃಹಲಕ್ಷಿ ಯೋಜನೆಯ ಮೂಲಕ ರೈತರ ಆಭರಣಗಳಿಗೆ ಶೇ.3 ರಷ್ಟು ಬಡ್ಡಿ ದರದಲ್ಲಿ ಬೆಳೆ ಸಾಲ.

ಶಾಶ್ವತ ಸಂಗ್ರಹಣ ಕೇಂದ್ರ ಸ್ಥಾಪನೆಗೆ ಒತ್ತು. ಗದಗದಲ್ಲಿ ಹೆಸರುಬೇಳೆ ಸಂಸ್ಕರಣಾ ಘಟಕ. ಮಲ್ಪೆ ಕಡಲ ತೀರದಲ್ಲಿ ಒಂದು ಜೆಟ್ಟಿ ನಿರ್ಮಾಣ.

ಮಲ್ಪೆ ಕಡಲು ತೀರದಲ್ಲಿ ತ್ಯಾಜ್ಯ ನಿರ್ವಹಣಾ ಘಟಕಕ ಸ್ಥಾಪನೆಗೆ 15 ಕೋಟಿ ರೂ. ಮೀಸಲು

ಪ್ರತೀ ಲೀಟರ್ ಹಾಲಿನ ಪ್ರೋತ್ಸಾಹ ಧನ 6 ರೂ. ಹೆಚ್ಚಳ. ಮೀನುಗಾರಿಕಾ ದೋಣಿಗಳಿಗೆ ಶೇ.50ರಷ್ಟು ಸಹಾಯಧನ.

10 ಸಾವಿರ ಬಡ ನಿರುದ್ಯೋಗ ಯುವಕ ಯುವತಿಯರಿಗೆ ನಾಟಿ ಕೋಳಿ ತರಬೇತಿ.

ರೇಷ್ಮೇ ಸಂಶೋಧನೆಗೆ 2 ಕೋಟಿ ರೂ. ಮೀಸಲು. ದಾಳಿಂಬೆ, ದ್ರಾಕ್ಷಿ ಬೆಳೆಗಾರರಿಗೆ
150 ಕೋಟಿ ರೂ. ಅನುದಾನ.

ಕರಾವಳಿ, ಮಲೆನಾಡಿನ ಮಳೆ ಹೆಚ್ಚು ಬೀಳುವ ಕಾರಣ ಭತ್ತ ಬೆಳೆಯಲು ಪ್ರೋತ್ಸಾಹ. ಪ್ರತೀ ಹೆಕ್ಟೇರಿಗೆ 7 ಸಾವಿರ ರೂ. ಪ್ರೋತ್ಸಾಹ ಧನ.

ಸಿರಿ ಧಾನ್ಯಗಳ ಬೆಳೆಯುವ ರೈತರ ಖಾತೆಗೆ 10 ಸಾವಿರ ರೂ. ಹಣ ಜಮೆ. ಪ್ರತೀ ಹೆಕ್ಟೇರ್ ಹೊಂದಿನ ರೈತರ ಖಾತೆಗೆ ಹಣ ಜಮೆ. ಮಳೆಯ ಅಭಾವದಿಂದ ಕೃಷಿ ಬೆಳವಣಿಗೆ ಶೇ.4.8 ರ ಕುಸಿತವಾಗುವ ಸಾಧ್ಯತೆ.

ಹಿರಿಯ ನಾಗರಿಕರ ಮಾಸಶಾನ 600 ರೂ. 1 ಸಾವಿರ ರೂ.ಗೆ ಹೆಚ್ಚಳ. ಹೆರಿಗೆ ಪೂರ್ವದ 3 ತಿಂಗಳು ಹೆರಿಗೆ ನಂತರ 3 ತಿಂಗಳ ಕಾಲ ಪ್ರತೀ ತಿಂಗಳು 1 ಸಾವಿರ ರೂ. ಬಾಣಂತೀಯರಿಗೆ
ನೀಡಲಾಗುತ್ತದೆ.

ಮನೆ ನಿರ್ಮಾಣಕ್ಕೆ
ಆನ್‌ಲೈನ್ ಮೂಲಕ 48,772 ಅರ್ಜಿಗಳನ್ನು ಸ್ವೀಕರಿಸಿದ್ದು,
ಜಾಗ ಗುರುತಿಸಿ ಶೀಘ್ರವೇ ಮನೆ ನಿರ್ಮಾಣ.

ಸಂಧ್ಯಾ ಸುರಕ್ಷಾ ಮಾಸಾಶನ 1 ಸಾವಿರಕ್ಕೆ ಏರಿಕೆ

ಲೋಕೋಪಯೋಗಿ ಇಲಾಖೆಗೆ 10,405 ಕೋಟಿ ರೂ. ಅನುದಾನ. ಬೆಂಗಳೂರಿನಲ್ಲಿ 64 ಕೀಲೋ ಮೀಟರ್ ಉದ್ದದ ಫೆರಿಫೆರಲ್ ರಸ್ತೆ,

100 ಕಿ.ಮೀ ಉದ್ದ ಎಲಿವೆಟೇಡ್ ಕಾರಿಡರ್ ನಿರ್ಮಾಣಕ್ಕೆ ಅನುಮೋದನೆ.

ತಿಪ್ಪಗೊಂಡನಗಳ್ಳಿ ಜಲಾಶಯದ ಪುನಶ್ಚೇತನಕ್ಕೆ ಕ್ರಮ.

ಮನೆ ನಿರ್ಮಾಣಕ್ಕೆ
ಆನ್‌ಲೈನ್ ಮೂಲಕ 48,772 ಅರ್ಜಿಗಳನ್ನು
ಸ್ವೀಕರಿಸಿದ್ದು, ಜಾಗ ಗುರುತಿಸಿ ಶೀಘ್ರವೇ ಮನೆ ನಿರ್ಮಾಣ.

415 ಕೋಟಿ ರೂ. ವೆಚ್ಚದಲ್ಲಿ ನಗರ ಯೋಜನೆಗಳಿಗೆ ಚಾಲನೆ, ಕರ್ನಾಟಕ ಬಯಲು ಶೌಚ ಮುಕ್ತ ಜಿಲ್ಲೆ.

ಎಪಿಎಲ್ ಕುಟುಂಬಗಳಿಗೆ
ಆರೋಗ್ಯ ಯೋಜನೆ ವಿಸ್ತರಣೆ. 160 ಪಬ್ಲಿಕ್ ಶಾಲೆ ಆರಂಭ. ಸಣ್ಣ ನಗರಗಳಿಗೆ ಕೈಗಾರಿಕೆ ವಿಸ್ತರಣೆಗೆ ಕ್ರಮ.

ಬಡವರ ಬಂದು ಯೋಜನೆಯ ಮೂಲಕ 13,522 ಬೀದಿ ಬದಿಯ ವ್ಯಾಪಾರಿಗಳಿಗೆ ಒಟ್ಟು 7.69 ಕೋಟಿ ರೂ. ಸಾಲ ನೀಡಿಕೆ.

ಕಾವೇರಿನ ನೀರಿನ ಸಮರ್ಪಕ ಬಳಕೆಗೆ ಒತ್ತು.

ಮೇಕೆದಾಟಿಗೆ ಡಿಪಿಆರ್ ಸಲ್ಲಿಸಲಾಗಿದ್ದು, ಇದು ಮಹತ್ವದ ಮೈಲುಗಲ್ಲು. ಕರ್ನಾಟಕ ತಮಿಳುನಾಡು ರೈತರಿಗೆ ಸಹಕಾರ.

ರೈತರು ಕೃಷಿಯಲ್ಲಿ ಕೆಲ ಬದಲಾವಣೆ ಮಾಡಬೇಕು. ಇಸ್ರೇಲ್ ಮಾದರಿ,

ನೈಸರ್ಗಿಕ ಪದ್ಧತಿ ಅಳವಡಿಕೆಗೆ ಪ್ರೋತ್ಸಹಾ. 12 ಲಕ್ಷ ರೂ. ಸಾಲ ಖಾತೆಗಳಿಗೆ 5,450 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಎರಡೂವರೆ ಸಾವಿರ ಕೋಟಿಗೆ ಮನವಿ ಸಲ್ಲಿಸಿದರೂ 900 ಕೋಟಿ ರೂ. ಹಣ ಬಿಡುಗಡೆ

14 ವರ್ಷ ಬರ ಬಂದಿದೆ. ರಾಜ್ಯದ 156 ತಾಲೂಕುಗಳು ಬರ ಬಂದಿದೆ. ಕೊಡಗಿನಲ್ಲಿ ಮನೆ ಕಳೆದುಕೊಂಡ 843 ನಿವಾಸಿಗಳಿಗೆ ಮನೆ ಕಟ್ಟುವ ಕೆಲಸ ನಡೆಯುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos