ಕರ್ನಾಟಕ ರಾಜ್ಯ ವಾರ್ಷಿಕ ಚಲನ ಚಿತ್ರ ಪ್ರಶಸ್ತಿ ಪುನರಾರಂಭ: ಸಿಎಂ ಸಿದ್ದು

ಕರ್ನಾಟಕ ರಾಜ್ಯ ವಾರ್ಷಿಕ ಚಲನ ಚಿತ್ರ ಪ್ರಶಸ್ತಿ ಪುನರಾರಂಭ: ಸಿಎಂ ಸಿದ್ದು

ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿರುವ ಕರ್ನಾಟಕ ರಾಜ್ಯ ವಾರ್ಷಿಕ ಚಲನ ಚಿತ್ರ ಪ್ರಶಸ್ತಿಯನ್ನು ಪುನರಾರಂಭಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ ಪ್ರಶಸ್ತಿಗೆ ಸಂಬಂಧಿಸಿದಂತೆ ಸಮಿತಿಗಳನ್ನು ಮಾಡಿದ್ದು ಇವುಗಳು ವರದಿ ನೀಡಿದ ತಕ್ಷಣ ಈ ವರ್ಷದ್ದು ಸೇರಿದಂತೆ ಹಿಂದಿನ ವರ್ಷಗಳ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಮುಖ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಫೆಬ್ರವರಿ 29 ರಿಂದ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಚಲನಚಿತ್ರೋತ್ಸವ ಉದ್ಘಾಟಿಸಿದ್ದಾರೆ ಈ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದ್ದರು.

ದೇಶದಲ್ಲಿ ಅನೇಕ ಧರ್ಮ ಜಾತಿ ಭಾಷೆಗಳಿವೆ ನಾವು ಇವೆಲ್ಲವನ್ನೂ ಮೀರಿ ಮನುಷ್ಯರಾಗಿ ಬಾಳುವ ಪ್ರಯತ್ನವನ್ನು ಮಾಡುವ ಸಂದೇಶವನ್ನು ನೀಡುವುದೇ ಈ ಚಿತ್ರೋದ್ಯಮಗಳ ಉದ್ದೇಶ.  ಈ ಸಮಾಜದಲ್ಲಿ ನಾವೆಲ್ಲರೂ ಸಮಾನತೆ ತರಲು ಪ್ರಯತ್ನ ಮಾಡಬೇಕು. ಎಲ್ಲಾ ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು.

ಅದೇ ನಮ್ಮ ಸಂವಿಧಾನದ ತಿರುಳು ಹೀಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಚಲನಚಿತ್ರಗಳನ್ನು ಮಾಡುವವರಿಗೆ ಸರ್ಕಾರ ಹಣಕಾಸಿನ ಬೆಂಬಲ ಸೇರಿದಂತೆ ಇತರ ಎಲ್ಲ ಸಹಕಾರ ನೀಡಲಿದೆ ಎಂದು ಘೋಷಿಸಿದರು.

ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ನಟ ಸಾಧುಕೋಕಿಲ, ನಟಿ ಆರಾಧನಾ, ಚಿತ್ರೋತ್ಸವ ಸಮಿತಿ ಅಧ್ಯಕ್ಷ ಕೆ ವಿ ತ್ರಿಲೋಕ ಚಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್, ಎಂ ನಿಂಬಾಳ್ಕರ್ ಮತ್ತು ಹಲವಾರು ಗಣ್ಯರು ಉಪಸ್ಥಿತಿಯಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos