ರಾಜ್ಯದಲ್ಲ ಇನ್ನೂ ಕೆಲ ದಿನ ಮಳೆ ಇಲ್ಲ

ರಾಜ್ಯದಲ್ಲ ಇನ್ನೂ ಕೆಲ ದಿನ ಮಳೆ ಇಲ್ಲ

ಬೆಂಗಳೂರು, ಜೂ. 19: ಬೇಸಿಗೆಯ ಬಿಸಿ ಮುಂಗಾರು ಮಳೆ ಅಲ್ಲಲ್ಲಿ ಸುರಿದ ಕಾರಣ ತಂಪಾಗಿದ್ದರೇ, ಇನ್ನೂ ರಾಜ್ಯದ ಅನೇಕ ಕಡೆಯಲ್ಲಿ ಮಳೆಯ ಮುಖವನ್ನೇ ಕಂಡಿಲ್ಲ. ಹೀಗಾಗಿ ಮುಂಗಾರು ಮಳೆಯ ನಿರೀಕ್ಷೆಯೊಂದಿಗೆ ಭಿತ್ತನೆಗಾಗಿ ಕಾಯುತ್ತಿದ್ದ ರೈತರಲ್ಲಿ ಆತಂಕ ಮೂಡಿದೆ.

ಈ ಮಧ್ಯೆ ಮುಂಗಾರುಮಳೆ ಜೂನ್.8ಕ್ಕೆ ರಾಜ್ಯಕ್ಕೆ ಕಾಲಿಟ್ಟಿದ್ದರೂ, ರಾಜ್ಯಾದ್ಯಂತ ಮಾತ್ರ ಇನ್ನೂ ತನ್ನ ಹಸ್ತವನ್ನು ಚಾಚಿಲ್ಲ. ಹೀಗೆ ರಾಜ್ಯಾದ್ಯಂತ ಸುರಿಯಲು ಇನ್ನೂ 8 ದಿನಗಳ ಕಾಲ ತಡವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ನಿರ್ದೇಶ ಡಾ.ಜಿಎಸ್ ಶ್ರೀನಿವಾಸ ರೆಡ್ಡಿ, ಜೂನ್.20ರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಬೀಳಲಿದೆ. ಆದರೇ ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಮಳೆ ವಾತಾವರಣವನ್ನು ಮುಂದಿನ 8 ದಿನಗಳ ನಂತ್ರ ನಿರೀಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos